ಬೆಂಗಳೂರು,ಏಪ್ರಿಲ್,30,2025 (www.justkannada.in): ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಲೆ ಇಲ್ಲದ ಚಿತ್ರವೊದನ್ನು ಅಪ್ಲೋಡ್ ಮಾಡಿ, ಗಾಯಬ್ ಎಂಬ ವಿವಾದಿತ ಪೋಸ್ಟ್ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಯಾವುದೇ ವ್ಯಕ್ತಿ ಆಗಲಿ. ಯಾರೇ ಇರಲಿ ಅದು ಪ್ರಧಾನಿಯೇ ಇರಲಿ ಯಾವುದೇ ಮುಖಂಡರಿಗೆ ಅಗೌರವವನ್ನು ತೋರಬಾರದು. ಅವರ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಬಾರದು. ಬಿಜೆಪಿಯವರಾಗಲಿ ನಮ್ಮವರೇ ಆಗಲಿ ಈ ರೀತಿ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನ ಕರೆಯಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಮೋದಿ ಅಧಿವೇಶನದಲ್ಲಿ ಇರಬೇಕು ಏನೆಲ್ಲಾ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಬೇಕು ನಾವು ಪ್ರಧಾನಿಗೆ ಸಂಪೂರ್ಣ ಬೆಂಬಲ ಕೊಡುತ್ತೇವೆ. ದೇಶದ ರಕ್ಷಣೆಗೆ ಒಳ್ಳೆಯ ಹೆಜ್ಜೆ ಇಡಬೇಕು ಎಂದರು.
Key words: Mallikarjuna Kharge, Congress, tweet, PM Modi