ಮುಂಬೈ,ಸೆಪ್ಟೆಂಬರ್,1,2023(www.justkannada.in): ಸೆಪ್ಟಂಬರ್ 18 ರಿಂದ 22ರವರೆಗೆ ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ ಕರೆದ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದವರನ್ನು ಕೇಳದೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಹೊತ್ತಿ ಉರಿಯುತ್ತಿರುವ ಮಣಿಪುರ ವಿಚಾರವಾಗಿ ವಿಶೇಷ ಅಧಿವೇಶನ ಕರೆದಿಲ್ಲ. ಕೋವಿಡ್-19 ವೇಳೇ ವಿಶೇಷ ಅಧಿವೇಶನ ಕರೆಯಲಿಲ್ಲ, ಚೀನಾದ ವಿಷಯ ಅಥವಾ ನೋಟು ಅಮಾನ್ಯೀಕರಣ, ವಲಸೆ ಕಾರ್ಮಿಕರ ವಿಷಯಗಳ ಬಗ್ಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಿಲ್ಲ ಎಂದು ಕಿಡಿಕಾರಿದರು.
ದೇಶ ಸರ್ವಾಧಿಕಾರದತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ, ಈಗಿನ ಅಜೆಂಡಾ ಏನೆಂದು ನನಗೆ ತಿಳಿದಿಲ್ಲ. ಇದು ದೇಶವನ್ನು ನಡೆಸುವ ಮಾರ್ಗವಲ್ಲ. ನಾವು ನಿಧಾನವಾಗಿ ಸರ್ವಾಧಿಕಾರದ ಕಡೆಗೆ ಹೋಗುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
Key words: Mallikarjuna Kharge-displeasure -against -Center – special session -Parliament.