ಮೈಸೂರು,ಮೇ,13,2021(www.justkannada.in): ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಮೂಕಳ್ಳಿ ಕಾಲೋನಿಯ ಸೋಲಿಗ ಜನಾಂಗದ ಶಿವಯ್ಯ ಮೃತಪಟ್ಟ ವ್ಯಕ್ತಿ. ಉಸಿರಾಟದ ಸಮಸ್ಯೆ ಹಿನ್ನಲೆ ಮೈಸೂರಿನ ಅರವಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಕ್ಸಿಜನ್ ಸಿಗದೆ ಶಿವಯ್ಯ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಆಕ್ಸಿಜನ್ ಖಾಲಿಯಾಗಿದೆ ಎಂದ್ರೂ ಕೇಳದೆ ಇನ್ನು ಸ್ವಲ್ಪ ಹೊತ್ತಿನಲ್ಲೇ ಆಕ್ಸಿಜನ್ ಬರುತ್ತೆ ಅಂತಾ ಸಬೂಬು ಹೇಳುತ್ತಾ ಕಾಲಹರಣ ಮಾಡಿದ ಆರೋಪ ಆಸ್ಪತ್ರೆಯ ವೈದ್ಯರ ವಿರುದ್ಧ ಕೇಳಿ ಬಂದಿದೆ.
ಹೀಗೆ ಅಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳದೆ ಇದ್ದುದ್ದರಿಂದ ಶಿವಯ್ಯ ತನ್ನ ಪತ್ನಿ ಎದುರೇ ಪ್ರಾಣಬಿಟ್ಟಿದ್ದಾರೆ. ಶಿವಯ್ಯ ಅವರದ್ದು ಸೋಲಿಗ ಜನಾಂಗದ ಬಡ ಕುಟುಂಬವಾಗಿದ್ದು, ಮನೆಯಲ್ಲಿ ದನ, ಕುರಿ ಎಲ್ಲಾ ಮಾರಿ, ಈಗಾಗಲೇ 70 ಸಾವಿರ ರೂಪಾಯಿ ಹಣ ಪಾವತಿ ಮಾಡಿದ್ದರು.
ಆದರೆ ಇನ್ನೂ ಒಂದು ಲಕ್ಷ ಹಣ ಕೊಡಿ ಅಂತಾ ಡೆಡ್ ಬಾಡಿ ಕೊಡದೆ ಆಸ್ಪತ್ರೆ ಆಡಳಿತ ಮಂಡಳಿ ವಿಳಂಬ ಮಾಡುತ್ತಿದ್ದು, ಆಸ್ಪತ್ರೆಗೆ ಕಟ್ಟಲು ಹಣವಿಲ್ಲದೆ ಇರುವುದರಿಂದ ಮೃತದೇಹ ಬಿಟ್ಟು ಹೋಗಲು ಕುಟುಂಬಸ್ಥರು ಮುಂದಾಗಿದ್ದಾರೆ. ಆಸ್ಪತ್ರೆ ಮುಂಭಾಗವೇ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ
Key words: man -death-lack of oxygen – private hospital-mysore