ಮೈಸೂರು,ಜೂನ್,12,2021(www.justkannada.in): ಮೈಸೂರಿನ ಅದೀಶ್ವರನಗರದಲ್ಲಿ ವ್ಯಕ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಮೈಸೂರು ಎಸ್ಪಿ ಆರ್.ಚೇತನ್ ತಿಳಿಸಿದರು.
ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್.ಪಿ ಆರ್. ಚೇತನ್, ರಾಜಸ್ಥಾನ ಮೂಲದ ತೇಜ್ ಮಾಲ್ ರಯೀಕಾ ಹಾಗೂ ಪ್ರಕಾಶ್ ಬಂಧಿತ ಆರೋಪಿಗಳಾಗಿದ್ದಾರೆ. ಇಲವಾಲ ನಿವಾಸಿ ರವೀಶ್ ಕೊಲೆಯಾಗಿದ್ದ ವ್ಯಕ್ತಿ. ಜೂ.10ರಂದು ಮೈಸೂರಿ ಅದೀಶ್ವರನಗರದಲ್ಲಿ ಕೊಲೆಯಾಗಿತ್ತು. ಮೂವರು ಒಟ್ಟಿಗೆ ಬಂಡವಾಳ ಹೂಡಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು.
ರವೀಶ್ ಹಣದ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದನು. ಬಳಿಕ ಆರೋಪಿಗಳಿಬ್ಬರು ಪಾರ್ಟಿ ಮಾಡುವುದಾಗಿ ಕರೆಸಿ ರವೀಶ್ ನನ್ನ ಕೊಲೆ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ ಎಂದು ಆರ್.ಚೇತನ್ ತಿಳಿಸಿದರು.
Key words: Man –murder- case – Mysore- Detention -two –accused-SP –R.Chethan