ಮಂಡ್ಯ,ಜು,25,2020(www.justkannada.in): ಕೊರೋನಾ ಸೋಂಕಿಗೆ ತುತ್ತಾಗಿ ಮಂಡ್ಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆರೆಕಟ್ಟೆ ಖ್ಯಾತಿಯ ಕಾಮೇಗೌಡರು ಇದೀಗ ಆರೈಕೆ ಮಾಡುವವರಿಲ್ಲದೇ ಅನ್ನ ನೀರು ಬಿಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ. ಗ್ರಾಮದಲ್ಲಿ ಕಟ್ಟೆಗಳನ್ನ ನಿರ್ಮಿಸಿ ಕಾಮೇಗೌಡರು ಪ್ರಖ್ಯಾತರಾಗಿದ್ದು ಈ ಬಗ್ಗೆ ಇತ್ತೀಚೆಗೆ ಪ್ರಧಾನಮಂತ್ರಿ ಮನ್ ಕಿ ಬಾತ್ ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ನಡುವೆ ಕಾಲು ನೋವಿನಿಂದ ಬಳಲುತ್ತಿದ್ದ ಕಾಮೇಗೌಡರು ಮಳವಳ್ಳಿ, ಮಂಡ್ಯ ಆಸ್ಪತ್ರೆಗಳಿಗೆ ಓಡಾದ್ದರು. ಈ ವೇಳೆ ಕಾಮೇಗೌಡರಿಗೆ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಅವರನ್ನ ಮಂಡ್ಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಕೊರೊನಾ ಪಾಸಿಟಿವ್ ಜೊತೆಗೆ ಕಾಲುನೋವಿನಿಂದಲೂ ಕಾಮೇಗೌಡರು ಬಳಲುತ್ತಿದ್ದು,ಕಾಮೇಗೌಡರಿಗೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿದೆ. ಇತ್ತ ಅವರ ಇಬ್ಬರು ಮಕ್ಕಳು ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ಇತರೇ ಕೆಲಸಗಳ ಆರೈಕೆ ಇಲ್ಲದೆ ಕಾಮೇಗೌಡರು ಸೊರಗಿದ್ದಾರೆ. ಮನೆಯಲ್ಲಿ ಶೌಚಾಲಯ ಸೇರಿದಂತೆ ಎಲ್ಲದಕ್ಕೂ ಮಕ್ಕಳನ್ನೆ ಅವಲಂಬಿಸಿದ್ದರು. ಅದ್ದರಿಂದ ಅನ್ನ ಆಹಾರ ಸೇವಿಸಿದ್ರೆ ಶೌಚಾಲಯಕ್ಕೆ ಹೋಗಬೇಕಾಗುತ್ತೆ ಎಂಬ ಕಾರಣಕ್ಕೆ ಕಾಮೇಗೌಡರು ಆಹಾರ ತ್ಯಜಿಸಿದ್ದಾರೆ.
Key words: mandya- Kamegowda- corona positive-isolation ward- Care