ಮಂಡ್ಯ,ಮೇ,2,2019(www.justkannada.in): ಮಂಡ್ಯದಲ್ಲಿ ನಾವೇ ಸಮರ್ಥರಿದ್ದೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅದೇ ಕಾರಣಕ್ಕೆ ಅವರು ನಮ್ಮನ್ನ ಸಂಪರ್ಕಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಿ ಚಲುವರಾಯ ಸ್ವಾಮಿ ಟಾಂಗ್ ನೀಡಿದ್ದಾರೆ.
ಮಂಡ್ಯದಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ ಚಲುವರಾಯಸ್ವಾಮಿ, ಮಂಡ್ಯ ಲೋಕಸಭೆ ಚುನಾವಣೆ ಸಂಬಂಧ ನನ್ನ ಜತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಲ್ಲದಿದ್ರೂ ಜಿಲ್ಲಾ ಉಸ್ತುವಾರಿ ಸಚಿವರಾದರೂ ಮಾತನಾಡಬಹುದಿತ್ತು. ಆದರೆ ಯಾರೂ ಮಾತನಾಡಿಸಲಿಲ್ಲ. ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ರು ಅದ್ರೆ ಕೊಡಲಿಲ್ಲ. ಅಲ್ಲದೆ ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರು ಸೂಚಿಸಿದ್ದರು. ಹೀಗಾಗಿ ಅವರ ಪರ ಪ್ರಚಾರ ನಡೆಸಿಲ್ಲ ಎಂದರು.
ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಾಗದ ಸ್ಥಿತಿ ಅಂದು ಇತ್ತು. ಹೀಗಾಗಿ ನಿಖಿಲ್ ಪರ ಪ್ರಚಾರ ಮಾಡಲಿಲ್ಲ. ಯಾರ ಪರವೂ ಪ್ರಚಾರ ಮಾಡದೇ ದೂರ ಉಳಿದವು. ಈ ನಡುವೆ ಅಧಿಕಾರಿಗಳೇ ಹಣ ಹಂಚುವ ಕೆಲಸದಲ್ಲಿ ತೊಡಗಿದ್ದರು. ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಾಗೆಯೇ ನಮ್ಮ ಮನೆಯ ಬಳಿ 8 ಮಂದಿ ಗುಪ್ತಚರ ಅಧಿಕಾರಿಗಳನ್ನ ಬಿಟ್ಟಿದ್ದರು. ನಮ್ಮ ವಿರುದ್ದ ಅಗತ್ಯವಿರುವಷ್ಟು ಸಾಕ್ಷ್ಯ ಕಲೆ ಹಾಕಿದ್ದಾರೆ. ಗುಪ್ತಚರ ಅಧಿಕಾರಿಗಳನ್ನ ಬಿಡಲು ನಾವೇನು ಉಗ್ರರಾ ..? ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
Key words: Mandya- Lok Sabha- Election: – did not- contact – Former MLA- Chaluvarasaswamy – CM HD Kumaraswamy.