ಮಂಡ್ಯ,ಜ,18,2020(www.justkannada.in): ಸಕ್ಕರೆನಾಡಲ್ಲಿಂದು ಜಲಪಾತೋತ್ಸವ ಸಂಭ್ರಮ. ಹೌದು ಇಂದಿನಿಂದ ಎರಡು ದಿನಗಳ ಕಾಲ ಗಗನಚುಕ್ಕಿಯಲ್ಲಿ ಜಲಪಾತೋತ್ಸವ ನಡೆಯಲಿದೆ
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿರುವ ಗಗನಚುಕ್ಕಿಯಲ್ಲಿ ಜಲಪಾತೋತ್ಸವ ಆಚರಣೆ ಮಾಡಲಾಗುತ್ತಿದೆ, ರೈತರ ಮತ್ತು ಪ್ರಗತಿಪರರ ವಿರೋಧ ನಡುವೆ ಜಿಲ್ಲಾಡಳಿತ ಅದ್ದೂರಿ ಜಲಪಾತೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಂಡಿದೆ.
ಇಂದು ಮಧ್ಯಾಹ್ನ ಮೂರು ಗಂಟೆಗೆ ಜಲಪಾತೋತ್ಸವ ಕಾರ್ಯಕ್ರಮದ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಗಗನಚುಕ್ಕಿ ಬಳಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಕಾರ್ಯಕ್ರಮಕ್ಕಾಗಿ ಗಗಗನ ಚುಕ್ಕಿ ಬಳಿ ಅದ್ದೂರಿ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಜಲಪಾತ ಸೇರಿ ಸುತ್ತಮುತ್ತಲ ಸ್ಥಳದಲ್ಲಿ ಬಣ್ಣದ ವಿದ್ಯುತ್ ದೀಪಾಲಂಕಾರ ಮನಸೂರೆಗೊಳಿಸುತ್ತಿದೆ. ಈ ಮೂಲಕ ಜಲಪಾತದ ಸುತ್ತಮುತ್ತಲ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಜಲಪಾತದ ಸುತ್ತಮುತ್ತಲಲ್ಲಿ ಫ್ಲೆಕ್ಸ್ ,ಬ್ಯಾನರ್ ಗಳು ರಾರಾಜಿಸುತ್ತಿವೆ.
ರೈತರ ವಿರೋಧ ನಡುವೆ ಆಚರಿಸಲಾಗುತ್ತಿರುವ ಜಲಪಾತೋತ್ಸವವನ್ನು ಮಳವಳ್ಳಿ ಶಾಸಕ ಸಮರ್ಥಿಸಿಕೊಂಡಿದ್ದಾರೆ. ಕೆ.ಆರ್ಎಸ್ ಡ್ಯಾಂ ನೀರು ಬಳಸಿಕೊಂಡಿಲ್ಲ, ನೀರು ಬಿಡೋ ಅವಶ್ಯಕತೆ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
Key words: mandya-gaganachukki jalapatotsva-today