ಮಂಗಳೂರು,ಜ,22,2020(www.justkannada.in): ಮಂಗಳೂರು ಏರ್ ಪೋರ್ಟ್ ನಲ್ಲಿ ಆರೋಪಿ ಆದಿತ್ಯ ರಾವ್ ಗೆ ಬಾಂಬ್ ಇಡುವಂತೆ ಹೇಳಿಕೊಟ್ಟಿದ್ದು ಯಾರು ಈ ಬಗ್ಗೆ ತನಿಖೆಯಾಗಲಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಯು.ಟಿ ಖಾದರ್, ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟು ಆತ ಡಿಜಿಐಜಿಪಿ ಮುಂದೆ ಶರಣಾಗಿದ್ದಾನೆ. ಪುಣ್ಯಾತ್ಮ ಡಿಜಿ ಐಜಿಪಿ ಕಚೇರಿಗೆ ಹೋಗಿ ಶರಣಾಗಿದ್ದಾನಲ್ಲ. ಇಲ್ಲಾಂದ್ರೆ ಪ್ರಕರಣದಲ್ಲಿ ಯಾರ್ಯಾರ ಹೆಸರು ಬರುತ್ತಿತ್ತೊ..? ಪ್ರಕರಣದ ಹಿಂದೆ ದೊಡ್ಡ ಸಂಚು ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಅಣುಕು ಪ್ರದರ್ಶನದಂತೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯು.ಟಿಖಾದರ್, ನನಗೆ ಇದು ಪ್ರಹಸನ ಅನಿಸುವುದಿಲ್ಲ. ಪ್ರಕರಣದ ಬಗ್ಗೆ ಹೆಚ್.ಡಿಕೆ ಅನುಮಾನ ವ್ಯಕ್ತಪಡಿಸಿದ್ದರು. ಈ ಅನುಮಾನವನ್ನ ಸರ್ಕಾರ ದೂರ ಮಾಡಬೇಕಿದೆ. ಈ ಪ್ರಕರಣಕ್ಕೆ ಕಾರಣ ಮುಖ್ಯವೇ ಹೊರತು ಧರ್ಮ ಅಲ್ಲ. ಬಾಂಬ್ ಇಟ್ಟ ಪ್ರಕರಣವನ್ನ ಕೇರಳಾಗೆ ಲಿಂಕ್ ಮಾಡಲಾಗಿತ್ತು. ಹೀಗಾಗಿ ಗೃಹ ಸಚಿವರು ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
Key words: mangalore airport-bomb-Adityarao-investigate- Former minister- UT Khader