ಮಂಗಳೂರು,ಜೂ,6,2020(www.justkannada.in): ರಾಜ್ಯದಲ್ಲಿ ಹರಡುತ್ತಿರುವ ಕೊರೋನಾವನ್ನ ತಡೆಗಟ್ಟಲು ಸಾಕಷ್ಟು ಮುಂಜಾಗ್ರತೆಯನ್ನು ವಹಿಸಲಾಗುತ್ತದೆ.. ಜನರೂ ಕೂಡ ವಿಶೇಷ ಕಾಳಜಿಯಿಂದ ರಕ್ಷಣಾ ಕ್ರಮ ಅಳವಡಿಸುತ್ತಿದ್ದಾರೆ. ಅಂತೆಯೇ ಮಂಗಳೂರಿನಲ್ಲಿ ಬಸ್ ನಿರ್ವಾಹಕರೊಬ್ಬರು ಕೋವಿಡ್-19ನಿಂದ ರಕ್ಷಣೆಗಾಗಿ ಪಿಪಿಇ ಕಿಟ್ ಧರಿಸಿ ಕರ್ತವ್ಯ ಆರಂಭಿಸಿ ಗಮನ ಸೆಳೆಯುತ್ತಿದ್ದಾರೆ.
ನಗರದ ಸ್ಟೇಟ್ ಬ್ಯಾಂಕ್ನಿಂದ ಶಕ್ತಿನಗರಕ್ಕೆ ತೆರಳುವ ರೂಟ್ ನಂಬರ್ 6ಎ ಸಿಟಿ ಬಸ್ಸಿನ ನಿರ್ವಾಹಕ ವಿವೇಕ್ ಕೊರೋನ ವೈರಸ್ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕೋವಿಡ್ ರಕ್ಷಣಾ ಕವಚ ಅಳವಡಿಸಿಕೊಂಡಿದ್ದಾರೆ. ಈ ಬಸ್ಸಿನ ಮಾಲೀಕ ನಿತಿನ್ ಶೆಟ್ಟಿ ಪಿಪಿಇ ಕಿಟ್ ನ್ನು ನಿರ್ವಾಹಕರಿಗೆ ನೀಡಿದ್ದಾರೆ.
ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆಗೆ ಮಿತಿ ಹೇರುವುದು ಮತ್ತು ಸುರಕ್ಷಿತ ಅಂತರ ಕಾಪಾಡಲು ಆದ್ಯತೆ ನೀಡಲು ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಬಸ್ಸಿನ ನಿರ್ವಾಹಕರಿಗೆ ಕೋವಿಡ್ ರಕ್ಷಣಾ ಕವಚವನ್ನು ಬಸ್ ಮಾಲೀಕರು ನೀಡಿ ಕಾಳಜಿ ಮೆರೆದಿದ್ದಾರೆ.
Key words: mangalore- corona virus-bus conductor -wearing -PPE kit.