ಬೆಂಗಳೂರು,ಫೆ,19,2020(www.justkannada.in): ವಿಧಾನಸಭಾ ಕಲಾಪದಲ್ಲಿ ಇಂದು ಮಂಗಳೂರು ಗಲಭೆ ಪ್ರಕರಣ ಪ್ರತಿಧ್ವನಿಸಿದ್ದು ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಪೊಲೀಸ್ ಆಯುಕ್ತರು ನಿಂತು ಗೋಲಿಬಾರ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ವಿಧಾನಸಭೆ ಕಲಾಪದಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಕಿಡಿಕಾರಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಮಂಗಳೂರಿನಲ್ಲಿ ಪೊಲೀಸ್ ಆಯುಕ್ತರು ನಿಂತು ಗೋಲಿಬಾರ್ ಮಾಡಿಸಿದ್ದಾರೆ. ಮಂಗಳೂರು ಕಮಿಷನರ್ ಅವರೇ 144 ಸೆಕ್ಷನ್ ಹಾಕಿದ್ರಿ. ಹೀಗಾಗಿ ಗೋಲಿಬಾರ್ ನಲ್ಲಿ ಇಬ್ಬರ ಸಾವಿಗೆ ಪೊಲೀಸ್ ಆಯುಕ್ತರೇ ಕಾರಣ ಎಂದು ಆರೋಪಿಸಿದರು.
ಮಂಗಳೂರು ಗಲಭೆ ಪ್ರಕರಣ ಪೊಲೀಸರ ಕ್ರಮ ಪೂರ್ವಯೊಜಿತ. ಈ ಹಿಂದೆ ಪೊಲೀಸರು ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಮಾಡಿರಲಿಲ್ಲ. ಕರ್ನಾಟಕ ಪೊಲೀಸ್ ರಾಜ್ಯ ಯಾವತ್ತು ಆಗಿಲ್ಲ. ಇಬ್ಬರು ಅಮಾಯಕರು ಗೋಲಿಬಾರ್ ನಲ್ಲಿ ಸಾವನ್ನಪ್ಪಿದ್ದಾರೆ. ಲಾಠಿ ಚಾರ್ಜ್ ಮಾಡಬಾರದು ಅಂತ ಸಿಎಂ ಬಿಎಸ್ ವೈ ಆದೇಶ ನೀಡಿದ್ದರು. ಆದೇಶ ನೀಡಿದ್ದರೂ ಸಹ ಸಿಎಂ ಆದೇಶ ಉಲ್ಲಂಘಿಸಿ ಲಾಠಿಚಾರ್ಜ್ ಗೋಲಿಬಾರ್ ನಡೆಸಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆಯಾ..? ಎಂದು ಪ್ರಶ್ನಿಸಿದರು.
ಗೋಲಿಬಾರ್ ನಲ್ಲಿ ಮೃತಪಟ್ಟವರಿಗೆ ಸರ್ಕಾರ ಪರಿಹಾರ ಘೋಷಿಸಿ ಅದನ್ಹನ ವಾಪಸ್ ಪಡೆದರು. ಅದರ ಮೇಲೆ ಯಾರದ್ದೋ ಒತ್ತಡ ಇರಬೇಕು ಅನ್ನಿಸುತ್ತಿದೆ. ಮೃತಪಟ್ಟ ಇಬ್ಬರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದರು.
Key words: Mangalore- Golibar- police Commissioners-session- Siddaramaiah-allegations