ಮಂಗಳೂರಲ್ಲಿ ನಡೆದ ಪತ್ರಕರ್ತರ ರಾಜ್ಯ ಮಟ್ಟದ ಸಮ್ಮೇಳನದ ಸೈಡ್ ಲೈಟ್ಸ್…

 

ಪತ್ರಿಕೆ ಹೊತ್ತ ಪಲ್ಲಕ್ಕಿ ಮೆರವಣಿಗೆ

ಪತ್ರಕರ್ತರ ರಾಜ್ಯ ಸಮ್ಮೇಳನ ಮೆರವಣಿಗೆ ನಗರದ ಫುಟ್ ಬಾಲ್ ಮೈದಾನದಿಂದ ಪುರಭವನದವರೆಗೆ ನಡೆಯಿತು. ಚೆಂಡೆ, ವಾದ್ಯ ಘೋಷದೊಂದಿಗೆ ನಡೆದ ಮೆರವಣಿಗೆಯಲ್ಲಿ ಶನಿವಾರದ ಎಲ್ಲ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳ ಲೋಗೋಗಳನ್ನು ಹೊತ್ತ ಪಲ್ಲಕಿ ಗಮನೆ ಸೆಳೆಯಿತು. ಪತ್ರಕರ್ತ ವೃತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಪೆನ್ನು, ಪುಸ್ತಕ ಹಾಗೂ ಕ್ಯಾಮರಾವನ್ನು ವೇದಿಕೆಯಲ್ಲಿ ಪ್ರತಿಬಿಂಬಿಸಲಾಯಿತು. ವೇದಿಕೆ ಪಕ್ಕದಲ್ಲಿ ಪತ್ರಿಕೆಗಳ ಕೊಲಾಜ್ ಗಮನ ಸೆಳೆಯಿತು.

 mangalore-journalist-media-working-journalist-photo-exhibition

ವಿವಿಧ ಮಳಿಗೆಗಳು
ಸಾವಯವ ಉತ್ಪನ್ನ, ಗೃಹಪಯೋಗಿ ಉತ್ಪನ್ನಗಳ ವಿವಿದ ಮಳಿಗೆಗಳು ಸಮ್ಮೇಳನದ ಹೊರ ಭಾಗದಲ್ಲಿದ್ದವು. ಬೆತ್ತದಿಂದ ಮಾಡಿದ ಕುರ್ಚಿ, ವಿವಿಧ ಅಡುಗೆ ಮನೆಯ ಉಪಕರಣಗಳು, ಹಾಗಲಕಾಯಿ ಚಟ್ನಿಪುಡಿ, ಉಪ್ಪಿನಕಾಯಿ, ವಿವಿಧ ಸಾವಯವ ಪೌಡರ್ ಗಳು ಮಳಿಗೆಗಳಲ್ಲಿದ್ದವು.

ಮಳೆ‌ನೀರು ಕೊಯ್ಲು ಪ್ರಾತ್ಯಕ್ಷಿಕೆ
ಸುರತ್ಕಲ್ ನಿರ್ಮಿತಿ ಕೇಂದ್ರದ ವತಿಯಿಂದ ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆ ಯನ್ನು ಸಮ್ಮೇಳನ ಸಭಾಂಗಣದ ಹೊರಭಾಗದಲ್ಲಿ ಆಯೋಜಿಸಲಾಗಿದೆ. ಮಳೆ ನೀರು ಕೊಯ್ಲು ಅಳವಡಿಸಿ ಯಶಸ್ವಿಯಾದ ಮನೆಗಳ ಚಿತ್ರಗಳನ್ನೂ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.

 mangalore-journalist-media-working-journalist-photo-exhibition

ವ್ಯಂಗಚಿತ್ರ, ಫೋಟೋ ಗ್ಯಾಲರಿ
ಪತ್ರಕರ್ತರು ಸಹಿತ ಖ್ಯಾತ ವ್ಯಂಗ್ಯ ಚಿತ್ರಕಾರರು ಬರೆದ ವ್ಯಂಗ್ಯ ಚಿತ್ರಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ದ.ಕ. ಜಿಲ್ಲಾ ಛಾಯಾಚಿತ್ರ ಪತ್ರಕರ್ತರು ತೆಗೆದ ಛಾಯಾಚಿತ್ರಗಳ ಪ್ರದರ್ಶನ ಮಳಿಗೆಗೆ ಪತ್ರಕರ್ತ ದಿ. ನಾಗೇಶ್ ಪಡು ಅವರ ಹೆಸರನ್ನಿಡಲಾಗಿತ್ತು.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ತೆಗೆದ ಛಾಯಾಚಿತ್ರಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಹೊರ ಜಿಲ್ಲೆಗಳ ಛಾಯಾಚಿತ್ರ ಪತ್ರಕರ್ತರ ವಿವಿಧ ಛಾಯಾಚಿತ್ರಗಳು ಆಕರ್ಷಿಸಿದವು.

ಸ್ಟಾಂಪ್ ಪ್ರದರ್ಶನ
ಎಸ್.ಎಲ್.ಶೇಟ್ ಸಂಸ್ಥೆಯ ಪ್ರಶಾಂತ್ ಶೇಟ್ ಅವರ ಸಂಗ್ರಹದ ಸ್ಟಾಂಪ್, ನಾಣ್ಯ, ಪೋಸ್ಟ್ ಕಾರ್ಡ್ ಪ್ರದರ್ಶನ ಮಳಿಗೆ ಇಲ್ಲಿದೆ. ನಿರ್ಮಲಾ ಟ್ರಾವೆಲ್ಸ್ ನವರ ಟ್ರಾವೆಲ್ಲಿಂಗ್ ಮಾರ್ಗದರ್ಶನ ಮಳಿಗೆಯನ್ನು ತೆರೆಯಲಾಗಿದೆ.

key words : mangalore-journalist-media-working-journalist-photo-exhibition