ಪತ್ರಕರ್ತರು ಒಳ್ಳೆಯ ವಿಷಯಗಳನ್ನು ಮಾತ್ರ ಸಮಾಜಕ್ಕೆ ನೀಡಿ- ಡಾ.ವೀರೇಂದ್ರ ಹೆಗ್ಗಡೆ ಕರೆ

 

ಮಂಗಳೂರು, ಮಾ.07, 2020 : ಇಂದು ಜನರು ಪತ್ರಿಕೆಗಳನ್ನು ಓದುವ ಜತೆಗೆ ವಿಷಯಗಳ ಸೂಕ್ಷ್ಮತೆಗಳನ್ನು ತಿಳಿದು ವಿಮರ್ಶಿಸುವ ಪ್ರಜ್ಞಾವಂತಿಕೆ ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ವರದಿಗಳನ್ನು ಬರೆಯುವಾಗ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಪತ್ರಕರ್ತರ ೩೫ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಮಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

mangalore-media-sammellana-veerendra-heggede

ಮಾಧ್ಯಮಗಳು ಇಂದು ಗೋವಿನಂತಾಗಬೇಕು. ಗೋವು ಏನೇ ತಿಂದರೂ ಅದನ್ನು ಶುದ್ಧೀಕರಿಸಿ ಶುದ್ಧ ಹಾಲು ನೀಡುತ್ತದೆ. ಅದೇ ರೀತಿ ಪತ್ರಿಕೆ, ದೃಶ್ಯ ಮಾಧ್ಯಮಗಳು ಏನೇ ವಿಷಯಗಳಿದ್ದರೂ ಅದನ್ನು ಶುದ್ಧೀಕರಿಸಿ ಒಳ್ಳೆಯ ವಿಷಯಗಳನ್ನು ಮಾತ್ರ ಸಮಾಜಕ್ಕೆ ನೀಡಬೇಕು. ಪತ್ರಕರ್ತರ ವರದಿ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಗೆ ಪೂರಕವಾಗಿರಲಿ ಎಂದು ಹೇಳಿದರು. ಪತ್ರಕರ್ತರು ಎಷ್ಟೇ ಒತ್ತಡ ಇದ್ದರೂ ತಾಳ್ಮೆಯಿಂದ ಇರಬೇಕು. ಈ ಸಹನಾಶಕ್ತಿ ನಿಮ್ಮ ಯಶಸ್ವಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

key words : mangalore-media-sammellana-veerendra-heggede