ಮಂಗಳೂರು,ಜುಲೈ,29,2022(www.justkannada.in): ಹತ್ಯೆಯಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಹಾರ ಘೋಷಿಸಿದ್ದರು. ಸಿಎಂ ಭೇಟಿ ಸಂದರ್ಭದಲ್ಲಿ ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿ ಮತ್ತೊಂದು ಕೊಲೆಯಾಗಿದ್ದು, ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತರಾಟೆ ತೆಗೆದುಕೊಂಡಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಯುಟಿ ಖಾದರ್, ಕೊಲೆ ಹಿಂದೆ ಯಾರಿದ್ದರೂ ಮಟ್ಟ ಹಾಕಬೇಕು. ನಿರಪರಾಧಿಗಳಿಗೆ ತೊಂರದೆಯಾಗಬಾರದು. ಮುಂದೆ ಈ ರೀತಿ ಘಟನೆಯಾಗಬಾರದು. ಕೊಲೆಗೆ ಕುಮ್ಮಕ್ಕು ನೀಡಿದವರನ್ನ ಪೊಲೀಸರು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಪರಿಹಾರ ನೀಡುವುದರಲ್ಲಿ ಸರ್ಕಾರದಿಂದ ತಾರತಮ್ಯ ಮಾಡುತ್ತಿದೆ. ಒಬ್ಬರಿಗೆ ಮಾತ್ರ ಪರಿಹಾರ ಯಾವ ನ್ಯಾಯ…? ಇಬ್ಬರು ತಾಯಂದಿರ ನೋವು ಒಂದೇ ಅಲ್ಲವೇ. ಸಮಾನೆತೆ ನೋವು ಸಿಎಂಗೆ ಗೊತ್ತಾಗಲ್ವಾ..? ಎಂದು ಶಾಸಕ ಯುಟಿ ಖಾದರ್ ಅಸಮಾಧಾನ ಹೊರ ಹಾಕಿದ್ದಾರೆ.
Key words: mangalore-murder-case- government-UT Khadar