ಮಂಗಳೂರು,ಸೆಪ್ಟಂಬರ್,22,2020(www.justkannada.in): ಅಪಾರ್ಟ್ ಮೆಂಟ್ ನ ಪ್ಲಾಟ್ ಗೆ ನುಗ್ಗಿ ಕಳ್ಳತನ ಮಾಡಿದ್ದ ಇಬ್ಬರು ಹಾಗೂ ಕಳ್ಳತನಕ್ಕೆ ಸಂಚು ರೂಪಿಸಿದ್ಧ ಅದೇ ಪ್ಲಾಟ್ ನ ಇಬ್ಬರು ಆರೋಪಿಗಳು ಸೇರಿ ನಾಲ್ವರನ್ನ ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೇರಳ ತಿರುವನಂತಪುರಮ್ ಮೂಲದ ಆರೋಪಿಗಳಾದ ರಘು , ಅಮೇಶ್ , ನವೀನ್ , ಬೆಳ್ತಂಗಡಿಯ ಸಂತೋಷ್ ಬಂಧಿತ ಆರೋಪಿಗಳು. ಆಗಸ್ಟ್ ತಿಂಗಳಿನಲ್ಲಿ ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿನ ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ಧ ವಿದ್ಯಾಪ್ರಭು ಅವರ ಫ್ಲಾಟಿಗೆ ಆಗಸ್ಟ್ 17 ರಂದು ರಾತ್ರಿ ಆರೋಪಿಗಳಾದ ರಘು ಮತ್ತು ಅಮೇಶ್ ಬಾಲ್ಕನಿ ಮೂಲಕ ನುಗ್ಗಿ ಕಳ್ಳತನ ಮಾಡಿದ್ದರು.
ಇದೀಗ ಪ್ರಕರಣ ಬೇಧಿಸಿದ ಸುರತ್ಕಲ್ ಠಾಣಾ ಪೊಲೀಸರು ಕೃತ್ಯದಲ್ಲಿ ಭಾಗಿಯಾದ ಕೇರಳ ತಿರುವನಂತಪುರಮ್ ಮೂಲದ ಆರೋಪಿಗಳಾದ ರಘು ಮತ್ತು ಅಮೇಶ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ಇನ್ನು ಅದೇ ಫ್ಲಾಟಿನಲ್ಲಿ ವಾಸ ಮಾಡಿಕೊಂಡಿದ್ದ ನವೀನ್ ಮತ್ತು ಸಂತೋಷ್ ಕಳ್ಳತನ ಮಾಡಲು ಸಂಚು ರೂಪಿಸಿದ್ದು ಇವರೇ ಎಂಬುದು ಆರೋಪಿಗಳನ್ನ ವಿಚಾರಣೆ ನಡೆಸಿದ ವೇಳೆ ತಿಳಿದು ಬಂದಿತ್ತು.
ನವೀನ್ ಸೇನೆಯಿಂದ ನಿವೃತ್ತರಾಗಿದ್ದು ಜಾರ್ಡಿನ್ ಅಪಾರ್ಟ್ ಮೆಂಟ್ ನ ಸೆಕ್ರಟರಿ ಹುದ್ದೆಯಲ್ಲಿ ಹಾಗೂ ವೈನ್ ಶಾಪ್ ಒಂದರಲ್ಲಿ ಮೇನಜರ್ ಕೆಲಸ ಮಾಡಿಕೊಂಡಿದ್ದನು. ಅದೇ ವೈನ್ ಶಾಪಿನಲ್ಲಿ ಬೆಳ್ತಂಗಡಿಯ ಸಂತೋಷ್ ವೈಟರ್ ಕೆಲಸ ಮಾಡುತ್ತಿದ್ದನು. ಇದೀಗ ಈ ಇಬ್ಬರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕಳ್ಳತನ ಮಾಡಿದ ಹಣದಲ್ಲಿ ದುಂದುವೆಚ್ಚ ಮಾಡಿದ್ದಾರೆ. ಬಂಧಿತರ ಬಳಿ ಇದ್ದ ರೂಪಾಯಿ 30,85,710 ರೂ. ನಗದು ಹಣ ಮತ್ತು 224 ಗ್ರಾಂ ಚಿನ್ನಾಭರಣಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಕೇರಳ ಮೂಲದ ಗುರುತ್ತಿಸಲ್ಪಟ್ಟ ಇನ್ನೂ ಇಬ್ಬರು ಆರೋಪಿಗಳಿದ್ದು ಅವರ ಶೋಧಕಾರ್ಯ ಮುಂದುವರೆದಿದೆ.
Key words: mangalore- police-Arrest- accused – robbery-thief