ಮೈಸೂರು,ಅಕ್ಟೋಬರ್,5,2020(www.justkannada.in): ಮನಿಷಾಳ ಸಾವು ಸರ್ಕಾರಿ ಕೊಲೆ. ಮನಿಷಾ ಬದುಕಿದ್ದರೆ ಜೀವಂತ ಸಾಕ್ಷಿಯಾಗುತ್ತಾಳೆ. ಈಗಾಗಿ ಅವಳನ್ನು ಮುಗಿಸಿದ್ದಾರೆ ಎಂದು ಸಾಹಿತಿ ದೇವನೂರ ಮಹದೇವ ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನಲ್ಲಿ ಮಾತನಾಡಿದ ದೇವನೂರ ಮಹದೇವ, ಯಾವುದೇ ತನಿಖೆಯನ್ನು ಯುಪಿ ಸರ್ಕಾರ ಮಾಡಿಲ್ಲ. ಸಾಕ್ಷ್ಯ ನಾಶ ಮಾಡಲು ಏನು ಬೇಕು ಅದನ್ನೆಲ್ಲ ಮಾಡಿದ್ದಾರೆ. ವೀರ್ಯ ಪರೀಕ್ಷೆ ಕೂಡ ತಡವಾಗಿ ನಡೆಸಿದ್ದಾರೆ ಮನಿಷಾ ಬದುಕಿದ್ದರೆ ಜೀವಂತ ಸಾಕ್ಷಿಯಾಗುತ್ತಾಳೆ. ಈಗಾಗಿ ಅವಳನ್ನು ಮುಗಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಮ್ಮ ನ್ಯಾಯಾಂಗ ವ್ಯವಸ್ಥೆಯು ಹದಗೆಟ್ಟಿದೆ. ನ್ಯಾಯಲಯವೇ ಕೈಕಟ್ಟಿ ಕುಳಿತಿದೆ. ಮನಿಷಾಳ ತಾಯಿಯಾಸೆಯನ್ನು ಪೂರೈಸಬೇಕು. ಅವಳ ಪ್ರತಿಮೆ ನಿರ್ಮಿಸಿ ಅರಿಶಿನ ಹಚ್ಚಬೇಕು. ಆಗ ತಾಯಿ ಭಾರತ ಮಾತೆಗೆ ಹಾಗೂ ಮನಿಷಾಳಿಗೆ ಸ್ವಲ್ಪ ಸಮಾಧಾನವಾಗುತ್ತದೆ ಎಂದು ದೇವನೂರ ಮಹೇದೇವ ತಿಳಿಸಿದರು.
Key words: Manisha’s-death – government- murder- Allegations –mysore-Devanoor Mahedeva.