ಚಾಮರಾಜನಗರ,ಅಕ್ಟೋಬರ್,30,2020(www.justkannada.in) : ಜಿಲ್ಲೆಯ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿ ತೋಟದ ಮನೆಗೆ ಕಳ್ಳತನ ಮಾಡಲು ಬಂದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ.ಕೇರಳ ಮೂಲದ ಪ್ರದೀಪ್ ಎಂಬುವವರು ಹೊಂಗಹಳ್ಳಿ ಗ್ರಾಮದಲ್ಲಿ ಜಮೀನೊಂದನ್ನು ಗುತ್ತಿಗೆ ಪಡೆದು ಅಲ್ಲೇ ಮನೆ ಕಟ್ಟಿಕೊಂಡು ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದರು.
ಪತಿ-ಪತ್ನಿಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಿತ್ತು ಪರಾರಿ
ಈ ವಿಷಯ ತಿಳಿದಿದ್ದ ಖದೀಮರು ನಿನ್ನೆ ತಡರಾತ್ರಿ ಕಬ್ಬಿಣದ ರಾಡ್, ಖಾರದಪುಡಿ ಹಿಡಿದು ಪ್ರದೀಪ್ ಮನೆ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆದ ಕೂಡಲೇ ಪತಿ-ಪತ್ನಿಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಿತ್ತು ಪರಾರಿಯಾಗುವಾಗ ಸಿದ್ದು ಎಂಬಾತ ಮನೆ ಮಾಲೀಕ ಪ್ರದೀಪ್ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಕಳ್ಳನನ್ನ ಕುರ್ಚಿ, ಪಾತ್ರೆಯಲ್ಲಿ ಹೊಡೆದು ಹಿಡಿದಿದ್ದಾರೆ.
ಬಳಿಕ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಗುಂಡ್ಲುಪೇಟೆ ಪಿಎಸ್ಐ ರಾಜೇಂದ್ರ, ಹೆಡ್ ಕಾನ್ಸ್ಟೇಬಲ್ ಶಿವನಂಜಪ್ಪ ಮತ್ತಿತರೆ ಸಿಬ್ಬಂದಿ ಆರೋಪಿ ಸಿದ್ದುವನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪರಾರಿಯಾಗಿದ್ದ ಪ್ರದೀಪ್ ಮತ್ತು ಕುಮಾರ್ನನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ, ಮನೆ ಮಾಲೀಕ ಪ್ರದೀಪ್ ಹಾಗೂ ಕಳ್ಳ ಸಿದ್ದು ಇಬ್ಬರೂ ಕೂಡ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
key words : man-went-theft-Gundlupet-guest-police