ಮೈಸೂರು ನಗರದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ: ಮುಡಾ ಅಯುಕ್ತ ಡಾ‌.ನಟೇಶ್ ರಿಂದ ಬಜೆಟ್ ಮಂಡನೆ‌…..

ಮೈಸೂರು,ಮಾರ್ಚ್,20,2021(www.justkannada.in): ಮೈಸೂರು ನಗರದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ನಡುವೆ ಪ್ರಸಕ್ತ ಆರ್ಥಿಕ ವರ್ಷವಾದ 2021-22 ಸಾಲಿನಲ್ಲಿ 146885.77 ಲಕ್ಷ ರೂಪಾಯಿಗಳಷ್ಟು ಸಂಪನ್ಮೂಲವನ್ನು ಕ್ರೋಢೀಕರಿಸಲು ಉದ್ದೇಶವನ್ನ ಹೊಂದಿದ್ದೇವೆ ಎಂದು ಮುಡಾ ಅಯುಕ್ತ ಡಾ‌.ನಟೇಶ್ ತಿಳಿಸಿದರು.jk

ಇಂದು 2021-22ನೇ ಸಾಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಜೆಟ್ ಅನ್ನ ಮುಡಾ ಕಚೇರಿಯ ಸಭಾಂಗಣದಲ್ಲಿ ಮುಡಾ ಅಯುಕ್ತ ಡಾ‌.ನಟೇಶ್ ಮಂಡನೆ‌ ಮಾಡಿದರು. ಮುಡಾ ಅಧ್ಯಕ್ಷ ಹೆಚ್.ವಿ‌.ರಾಜೀವ್ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನೆ ಮಾಡಲಾಯಿತು.

ಬಜೆಟ್ ಮಂಡನೆ ವೇಳೆ ಮಾತನಾಡಿದ ಮುಡಾ ಆಯುಕ್ತ ನಟೇಶ್,  ಪ್ರಸಕ್ತ ಆರ್ಥಿಕ ವರ್ಷವಾದ 2021-22 ಸಾಲಿನಲ್ಲಿ 146885.77 ಲಕ್ಷ ರೂಪಾಯಿಗಳಷ್ಟು ಸಂಪನ್ಮೂಲವನ್ನು ಕ್ರೋಢೀಕರಿಸಲು ಉದ್ದೇಶ ಹೊಂದಲಾಗಿದೆ.  ಮುಡಾದಿಂದ ಮೈಸೂರು ನಗರದ ಅಭಿವೃದ್ಧಿ ಮತ್ತು ಪ್ರಗತಿಗೆ ಪ್ರಸಕ್ತ ಸಾಲಿನಲ್ಲಿ 108311.10 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುವ ಉದ್ದೇಶವನ್ನ ಹೊಂದಿದ್ದೇವೆ ಎಂದರು.

ಒಟ್ಟಾರೆಯಾಗಿ ಪ್ರಸಕ್ತ ಸಾಲಿಗೆ 38574.67 ಲಕ್ಷ ರೂಪಾಯಿಗಳ ಹೆಚ್ಚುವರಿ ಉಳಿತಾಯದ ಆಯವ್ಯಯ ಮಂಡನೆ ಮಾಡಲಾಗಿದ್ದು ಮೈಸೂರು ನಗರದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಬಹುಮಹಡಿ ಗುಂಪು ವಸತಿ ಯೋಜನೆ, ವಲಸೆ ಕಾರ್ಮಿಕರಿಗೆ ಬೆಲವತ್ತ ಗ್ರಾಮದ ಬಳಿ ತಾತ್ಕಾಲಿಕ ವಸತಿ ವ್ಯವಸ್ಥೆ, ಪ್ರಾಧಿಕಾರದಿಂದ ಬಡಾವಣೆ ಅಭಿವೃದ್ಧಿಗೆ 50:50ರ ಅನುಪಾತದಲ್ಲಿ ಜಂಟಿ ಅಭಿವೃದ್ಧಿ ಯೋಜನೆ ಜಾರಿಗೆ ತರಲಾಗುತ್ತಿದೆ.

ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು , 14 ವಿವಿಧ ರಸ್ತೆಗಳ ಅಭಿವೃದ್ಧಿಗೆ 2400ಲಕ್ಷ ರೂ ಮೀಸಲು ಇಡಲಾಗಿದೆ. ನಗರಾಭಿವೃದ್ಧಿ ವ್ಯಾಪ್ತಿಗೆ ಬರುವ ವಿವಿಧ ಕೆರೆಗಳ ಅಭಿವೃದ್ಧಿಗೆ 400 ಲಕ್ಷ ರೂ ಅನುದಾನ ನೀಡಲಾಗುತ್ತಿದೆ. ಪ್ರಾಧಿಕಾರದ ಬಡಾವಣೆಗಳಿಗೆ ಕುಡಿಯುವ ನೀರನ್ನು ಪೂರೈಸುವ ಸಮಗ್ರ ಯೋಜನೆ ಜಾರಿಗೆ ತರಲಾಗಿದೆ ಎಂದು ಮುಡಾ ಆಯುಕ್ತ ನಟೇಶ್ ತಿಳಿಸಿದರು.

ಭೂಸ್ವಾಧೀನ ಪ್ರಕರಣಗಳಲ್ಲಿ ಭೂಮಾಲೀಕರಿಗೆ ಪರಿಹಾರ ಪಾವತಿಗೆ ಕ್ರಮ ವಹಿಸಲಾಗುವುದು. ಪ್ರಾಧಿಕಾರದ ಬಡಾವಣೆಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ. ಖಾಸಗಿ ಸಹಭಾಗಿತ್ವದಲ್ಲಿ ಉದ್ಯಾನವನಗಳ ಅಭಿವೃದ್ಧಿ, ನಗರ ಅರಣ್ಯೀಕರಣದತ್ತ ಹೆಜ್ಜೆ ಇಡಲಾಗುತ್ತಿದೆ ಎಂದು ಮುಡಾ ಆಯುಕ್ತ ನಟೇಶ್ ತಿಳಿಸಿದರು.

ಹಾಗೆಯೇ ಅರ್ ಟಿ ನಗರದಲ್ಲಿ ವಿದ್ಯುತ್ ಸ್ಟೇಷನ್ ನಿರ್ಮಾಣ. ಬನ್ನಿ ಮಂಟಪ ಪಂಜಿನ ಕವಾಯತು ಮೈದಾನ ಉಳಿಕೆ ಜಾಗ ಪ್ರವಾಸೋದ್ಯಮಕ್ಕೆ ಒತ್ತು  ನೀಡಲಾಗುವುದು, ದಟ್ಟಗಳ್ಳಿಯಲ್ಲಿ ಮೂರನೇ ಹಂತದಲ್ಲಿ ಆಟದ ಮೈದಾನ ನಿರ್ಮಾಣ, ಶಾರದೇವಿನಗರದಲ್ಲಿ ಈಜುಕೊಳ ನಿರ್ಮಾಣ. ಕುಕ್ಕರಹಳ್ಳಿ ಕೆರೆ ಭಾಗದಲ್ಲಿ ಲಾಲ್ ಬಾಗ್ ಅಭಿವೃದ್ಧಿ ಗೆ ಒತ್ತು ನೀಡುವುದು. ಮಿಲೇನಿಯಂ ವೃತ್ರದಲ್ಲಿ ವಾಣಿ ವಿಲಾಸ ಸನ್ನಿಧಾನ ಪ್ರತಿಮೆ ಸ್ಥಾಪನೆ. ಮೈಸೂರಿನ ಎರಡು ಭಾಗದಲ್ಲಿ ಗೋ ಶಾಲೆಗೆ ನಿವೇಶನ ಸೇರಿ ಹಲವು ಯೋಜನೆಗಳನ್ನ ಮುಡಾ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.Many programs - development - Mysore city-Budget- MUDA- Commissioner-Dr. Natesh

ಬಜೆಟ್ ಮಂಡನೆ ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಹರ್ಷವರ್ಧನ್, ಎಂಎಲ್ಸಿಗಳಾದ ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಧರ್ಮಸೇನಾ ಹಾಗೂ ಮುಡಾ ಸದಸ್ಯರು ಭಾಗಿಯಾಗಿದ್ದರು.

ENGLISH SUMMARY….

Several programs for development of Mysuru: MUDA Commissioner Dr. Natesh presents budget
Mysuru, Mar. 20, 2021 (www.justkannada.in): Mysuru Urban Development Authority (MUDA) Commissioner Dr. Natesh today presented the 2021-22 budget. He announced several programs for the development of Mysuru City and also informed that MUDA has aimed to mobilize a sum of Rs. 1,46,885.77 lakh during the 2021-22 financial year.
MUDA has the aim of spending a sum of Rs. 1,08,311.10 lakh for various developmental activities in this financial year. The 2021-22 budget is an Rs.38,574.67 lakh surplus savings budget. A multi-storied residential complex, temporary residential arrangements for migratory workers near Belavatta Village were announced. MUDA will spend an amount at the ratio of 50:50 for the development of the layout.
Priority is given to the development of roads. A sum of Rs. 2,400 lakhs has been reserved for the development of 14 various roads and a sum of Rs. 400 lakh grants have been provided for the development of various tanks that come under MUDA limits. A comprehensive plan to provide drinking water to all the MUDA layouts is included in this year’s MUDA budget.Appreciation - Muda Budget-Mysore-Madikeri- Main Road-kuvempu name-GT Devegowda
MLA G.T. Devegowda, Harshavardhan, MLCs Sandesh Nagaraj, K.T. Srikantegowda, Martibbegowda, Dharmasena, and MUDA members were present at the budget meeting.
Key words: Many programs – development – Mysore city-Budget- MUDA- Commissioner-Dr. Natesh

Key words: Many programs – development – Mysore city-Budget- MUDA- Commissioner-Dr. Natesh