ಬೆಂಗಳೂರು,ನವೆಂಬರ್,20,2020(www.justkannada.in): ಮರಾಠ ಅಭಿವೃದ್ದಿ ನಿಗಮ ರಚನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡಲು ಕನ್ನಡಪರ ಸಂಘಟನೆಗಳು ಒಕ್ಕೊರಲ ನಿರ್ಧಾರ ಕೈಗೊಂಡಿವೆ.
ಮರಾಠ ಅಭಿವೃದ್ದಿ ನಿಗಮ ರಚನೆ ಖಂಡಿಸಿ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದರು. ಈ ಸಂಬಂಧ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಹೋಟೆಲ್ ನಲ್ಲಿ ಕನ್ನಡಪರ ಸಂಘಟನೆಗಳ ಕನ್ನಡ ಒಕ್ಕೂಟ ಸಭೆ ನಡೆಯಿತು. ಸಭೆಯಲ್ಲಿ ಚರ್ಚಿಸಿ ಇದೀಗ ಮರಾಠ ಅಭಿವೃದ್ದಿ ನಿಗಮ ರಚನೆ ಖಂಡಿಸಿ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.
ಸಭೆ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್ ಮರಾಠ ಅಭಿವೃದ್ದಿ ನಿಗಮ ರಚನೆ ವಿರೋಧಿಸಿ ಡಿಸೆಂಬರ್ 5 ರಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲಾಗುತ್ತದೆ. ನವೆಂಬರ್ 30ರೊಳಗೆ ಮರಾಠ ಅಭಿವೃದ್ದಿ ನಿಗಮ ರಚನೆ ಹಿಂಪಡೆಯಬೇಕು ಇಲ್ಲದಿದ್ದರೇ ಬಂದ್ ಮಾಡಲಾಗುತ್ತದೆ ಎಂದು ತಿಳಿಸಿದರು.
English summary…..
Karnataka Bundh on Dec. 5: Pro-Kannada organisations unanimous decision
Bengaluru, Nov. 20, 2020 (www.justkannada.in): Various Kannada organisations in the state have unanimously decided to call for a Statewide bundh on December 5, 2020, criticizing the decision of the State Government to establish the Maratha Development Corporation.
Kannada Chaluvali Paksha President Vatal Nagaraj has demanded the government to withdraw its decision within November 30 or they will be forced to call for a statewide bundh on December 5 from 6 am to 6pm.
Keywords: Karnataka Bundh/ December 5/ Vatal Nagaraj/ Kannada organisations
Key words: Maratha Development Corporation-Karnataka Bandh- Dec 5-decision – Kannada organizations