ಮೈಸೂರು: ಕಾಂಗ್ರೆಸ್ ತೆಕ್ಕೆಗೆ ಮಾರ್ಬಳ್ಳಿ ಗ್ರಾ.ಪಂ

ಮೈಸೂರು,ಏಪ್ರಿಲ್,12,2025 (www.justkannada.in): ಮೈಸೂರು ತಾಲ್ಲೂಕು ಮಾರ್ಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪದ್ಮ ಶಿವಣ್ಣನಾಯಕ ಹಾಗೂ ಉಪಾಧ್ಯಕ್ಷರಾಗಿ ನಾಗರಾಜು ಆಯ್ಕೆಯಾದರು.

ಮೈಸೂರು ತಾಲ್ಲೂಕು ಮಾರ್ಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ರಾಜೀನಾಮೆ ಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಪ.ಪಂಗಡದ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಾರ್ಬಳ್ಳಿ ಗ್ರಾಮದ  ಪದ್ಮ ಶಿವಣ್ಣನಾಯಕ ಅವರು ಒಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರು. ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಾರ್ಬಳ್ಳಿ ಹುಂಡಿ ನಾಗರಾಜು ಅವರು ಉಮೇದುವಾರಿಕೆಯನ್ನು ಸಲ್ಲಿಸಿದ್ದರು.

ತಲಾ ಒಂದೊಂದೇ ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಚುನಾವಣಾ ಅಧಿಕಾರಿಗಳು ಅಧ್ಯಕ್ಷರಾಗಿ ಪದ್ಮ ಶಿವಣ್ಣನಾಯಕ ಮತ್ತು ಉಪಾಧ್ಯಕ್ಷರಾಗಿ ನಾಗರಾಜು ಅವರು  ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಪಿಡಿಓ ಕುಮಾರಸ್ವಾಮಿ, ಕಾರ್ಯದರ್ಶಿ ಮಹೇಶ್ ಕಾರ್ಯನಿರ್ವಹಿಸಿದರು. 21 ಸದಸ್ಯರು ಹೊಂದಿರುವ  ಗ್ರಾ.ಪಂ.ಯಲ್ಲಿ ಕಾಂಗ್ರೆಸ್ ಬೆಂಬಲಿತ 14 ಸದಸ್ಯರು ಹಾಜರಿದ್ದರು.  ಸಭೆಯಲ್ಲಿ ಸದಸ್ಯರುಗಳಾದ ದೇವರಾಜ್ ಟಿ.ಕಾಟೂರು, ಪುಟ್ಟಸ್ವಾಮಿ, ಮಾರ್ಬಳ್ಳಿ ದೇವರಾಜು, ವೆಂಕಟೇಶ ವಿ,ನಾಗರಾಜು, ಲಕ್ಷ್ಮಿ,  ಶಿವಮ್ಮ, ರತ್ಮಮ್ಮ, ಜ್ಯೋತಿ, ಮಾಲಮ್ಮ , ಶಿವಮ್ಮ, ಬಸಮ್ಮ  ಉಪಸ್ಥಿತರಿದ್ದರು.

ತಾ.ಪಂ.ಮಾಜಿ ಸದಸ್ಯ  ಎಂ.ಎಸ್.ಎಸ್.ಕುಮಾರ್, ಎಂ.ಹೆಚ್.ರಾಜಶೇಖರಮೂರ್ತಿ, ಎಸ್.ಕೇಶವಮೂರ್ತಿ, ಕೆ.ಸಿ ಚಿಕ್ಕಣ್ಣ, ರಾಚನಾಯಕ, ಎಂ.ನಾಗರಾಜು, ಸ್ವಾಮಿನಾಯಕ,  ಸಿ.ಸ್ವಾಮಿ, ರಮೇಶ್, ಮರಿಯಪ್ಪ, ಸ್ವಾಮಿನಾಯಕ, ವೆಂಕಟಶೆಟ್ಟಿ, ಆರ್. ಸಿದ್ದರಾಜು, ಮಹದೇವಸ್ವಾಮಿ, ರಾಜಣ್ಣ, ಮಾರ್ಬಳ್ಳಿ, ಶಿವಣ್ಣ , ಇನ್ನೂ ಮುಂತಾದ ಮುಖಂಡರು ಹಾಜರಿದ್ದರು.

Key words: Mysore, Marballi Grama Panchayat, Congress