ಬೆಂಗಳೂರು,ಮಾರ್ಚ್,13,2024(www.justkannada.in): ಮೆಣಸಿನಕಾಯಿ ದರ ದಿಢೀರ್ ಕುಸಿತಗೊಂಡಿದ್ದಕ್ಕೆ ರೈತರು ಆಕ್ರೋಶ ಗೊಂಡು, ಹಾವೇರಿ ಜಿಲ್ಲೆ ಬ್ಯಾಡಗಿ ಮಾರುಕಟ್ಟೆ ಬಳಿ ಗಲಾಟೆ ನಡೆಸಿದ ಪ್ರಕರಣ ಸಂಬಂಧ 42 ಜನರನ್ನ ಬಂಧಿಸಿ ಹೇಳಿಕೆ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬ್ಯಾಡಗಿ ಎಂಪಿಎಂಸಿ ಕಚೇರಿ ಬಳಿ ಗಲಾಟೆ ಪ್ರಕರಣ ಸಂಬಂಧ 42 ಜನರನ್ನ ಬಂಧಿಸಿ ಅವರಿಂದ ಹೇಳಿಕೆ ಪಡೆಯಲಾಗಿದೆ. ಹೊರಗಿನಿಂದ ಬಂದವರು ಪರಾರಿಯಾಗಿದ್ದಾರೆ. ಪೊಲೀಸರ 1 ತಂಡ ಆಂಧ್ರ ಪ್ರದೇಶದ ನೆಲ್ಲೂರು ಕಡೆ ಕಳುಹಿಸಿಕೊಡಲಾಗಿದೆ. ತಪ್ಪಿಸಿಕೊಂಡವರನ್ನ ಬಂಧಿಸಲಾಗುತ್ತದೆ ಎಂದರು.
ಯಾವ ಕಾರಣಕ್ಕೆ ಗಲಾಟೆ ಆಗಿದೆ ಎಂಬುದನ್ನ ತನಿಖೆ ಮಾಡುತಿದ್ದೇವೆ. ಯಾರು ತಪ್ಪು ಮಾಡಿದ್ದಾರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಒಣಮೆಣಸಿನ ಕಾಯಿ ದರ ಇಳಿಕೆ ಮಾಡಿಸಿ ಗಲಾಟೆ ಮಾಡಿಸಿರಬಹುದು ಈ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದರು.
ಮೊನ್ನೆ ಒಣ ಮೆಣಸಿಕನಾಯಿ ದರ ಇಳಿಕೆಯಾಗಿದ್ದಕ್ಕೆ ಬ್ಯಾಡಗಿ ಮಾರುಕಟ್ಟೆ ಆಡಳಿತ ಕಚೇರಿ ಮೇಲೆ ಕಲ್ಲುತೂರಾಟ ನಡೆಸಲಾಗಿತ್ತು. ಕಚೇರಿ ಮುಂದೆ ಇದ್ದ ಕಾರಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ಹೊರ ಹಾಕಿದ್ದರು.
Key words: Market -riot –case-42 people-arrested- statement-Home Minister- Parameshwar