ನವದೆಹಲಿ:ಜುಲೈ-21:(www.justkannada.in) ಮಾರುತಿ ಬೇಝಾ ಕಾರು ಕೊನೆಗೂ ಹ್ಯುಂಡೈ ವೆನ್ಯೂ ಬೀಟ್ ಮಾಡುವಲ್ಲಿ ಸಾಧನೆ ಮಾಡಿದೆ ಎಂತಲೇ ಹೇಳಬೇಕು. ಹೌದು. ಮಾರುತಿ ಬ್ರೆಝಾ ಈಗ ಭಾರತದಲ್ಲಿ ಹೆಚ್ಚು ಮಾರಾಟವಾದ SUV ಕಾರು. 5 ವರ್ಷ ಉಚಿತ ವಾರೆಂಟಿ ಆಫರ್ ನೊಂದಿಗೆ ಹ್ಯುಂಡೈ ವೆನ್ಯೂ ಸೋಲಿದೆ ಬ್ರೇಝಾ.
ಮಾರ್ಚ್ 2016 ರಲ್ಲಿ ಮತ್ತೆ ಪ್ರಾರಂಭವಾದ ಈ SUV ಕಾರು ಮಾರಾಟ ಪಟ್ಟಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಥಾನದಲ್ಲಿದೆ. ಈ ಮೂರು ವರ್ಷಗಳಲ್ಲಿ, ಬ್ರೆಝಾದ ಪ್ರಾಬಲ್ಯಕ್ಕೆ ಪ್ರತಿಸ್ಪರ್ಧಿಯಾಗಿ ಅನೇಕ ಹೊಸ ಕಾರುಗಳನ್ನು ಬಿಡುಗಡೆ ಮಾಡಲಾಗಿದೆ, ಆದರೆ ಯಾವುದೂ ಬ್ರೆಝಾ ಮಾರಾಟದ ಅಂಕಿಅಂಶಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ ಎಂಬುದು ವಿಶೇಷ.
ಮೇ 2019 ರಲ್ಲಿ ಹ್ಯುಂಡೈ ವೆನ್ಯೂ ಮಾರಾಟ ಪ್ರಾರಂಭವಾಗುವವರೆಗೆ ಮಾರುತಿ ಬ್ರೇಝಾ ಮೊದಲಸ್ಥಾನದಲ್ಲಿತ್ತು. ಮಾರುತಿ ಬ್ರೇಝಾ ತಿಂಗಳಿಗೆ ಸರಾಸರಿ 15,000ಕ್ಕೂ ಹೆಚ್ಚು ಯುನಿಟ್ ಮಾರಾಟವನ್ನು ನೋಂದಾಯಿಸಿದೆ. ಬ್ರೇಝಾಗೆ ಪ್ರತಿಸ್ಪರ್ಧಿಯಾಗಿ ಬಂದ SUV ಕಾರುಗಳಾದ ಟಾಟಾ ನೆಕ್ಸನ್ ತಿಂಗಳಿಗೆ ಸುಮಾರು 4,500 ಯುನಿಟ್ಸ್, ಫೋರ್ಡ್ ಇಕೋಸ್ಪೋರ್ಟ್ ತಿಂಗಳಿಗೆ 3,000 ಯುನಿಟ್‌ಗಳನ್ನು ನೋಂದಾಯಿಸಿದರೆ, ಹೊಸದಾಗಿ ಬಿಡುಗಡೆಯಾದ ಮಹೀಂದ್ರಾ XUV500 ತಿಂಗಳಿಗೆ 5,000 ಯುನಿಟ್‌ಗಳನ್ನು ಪಡೆಯುತ್ತದೆ.
ಹ್ಯುಂಡೈ ವೆನ್ಯೂ ಆಕ್ರಮಣಕಾರಿ ಬೆಲೆಗಳೊಂದಿಗೆ ಮಾರುತಿ ಬ್ರೇಝಾ ಬೆಲೆಯನ್ನೇ ಬೀಟ್ ಮಾಡುವನಿಟ್ಟಿನಲ್ಲಿ ಮಾರಾಟ ಆರಭಿಸಿದ್ದು, ಮಾರ್ಚ್ 2019 ರಲ್ಲಿ 14,000ಕ್ಕೂ ಅಧಿಕ ಯುನಿಟ್ಸ್ ಗಳನ್ನು ಮಾರಾಟಮಾಡಿರುವುದರಿಂದ ಮಾರುತಿ ಬ್ರೆಝಾ ಮಾರಾಟವು ಮೇ ಮತ್ತು ಜೂನ್ 2019 ರಲ್ಲಿ 9,000 ಯುನಿಟ್‌ಗಳಿಗಿಂತ ಕಡಿಮೆಯಾಗಿದೆ.