ಬೆಂಗಳೂರು,ಜೂನ್,13,2022(www.justkannda.in): ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನಲೆ , ಜನ ಜಂಗುಳಿ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯ. ಆದರೆ ದಂಡಪ್ರಯೋಗ ಸದ್ಯಕ್ಕಿಲ್ಲ. ಜನರು 3ನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಇಂದು ಕೊವಿಡ್ ತಾಂತ್ರೀಕ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಕೆ. ಸುಧಾಕರ್, ಸಭೆಯಲ್ಲಿ ಕೊವಿಡ್ ಏರಿಕೆ ಹಾಗೂ ಮುಂಜಾಗ್ರತೆ ಬಗ್ಗೆ ಕೊವಿಡ್ ತಾಂತ್ರೀಕ ಸಲಹಾ ಸಮಿತಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ವಿದೇಶ ಹಾಗೂ ದೇಶದಲ್ಲಿ ಯಾವ ರೀತಿ ಸೋಂಕು ಏರಿಕೆಯಾಗಿದೆ ಇಳಿಕೆಯಾಗಿದೆ ಅಂತಾ ಚರ್ಚೆ ಮಾಡಲಾಗಿದೆ. ಸದ್ಯಕ್ಕೆ ಸಾವು ನೋವು ಸದ್ಯಕ್ಕೆ ಇಲ್ಲ. ಮೂರು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಕೇಸ್ ಏರಿಕೆಯಾಗಿದೆ ಎಂದರು.
ಜನ ಜಂಗುಳಿ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯ. ಮಾಸ್ಕ್ ದಂಡ ಪ್ರಯೋಗ ಸದ್ಯಕ್ಕೆ ಇಲ್ಲ. ಮಾಸ್ಕ್ ಹಾಕುವಂತೆ ಅರಿವು ಮೂಡಿಸುತ್ತೇವೆ. ಜನರು 3ನೇ ಡೋಸ್ ಹಾಕಿಸಿಕೊಳ್ಳಬೇಕು. ಲಸಿಕೆ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ ಇದರಿಂದ ಕೊರೊನಾ ಲಸಿಕೆ ವಿತರಣೆ ಕಷ್ಟವಾಗುತ್ತಿದೆ. ಲಸಿಕೆಗ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ ಎಂದರು.
Key words: Mask –mandatory- People – vaccine- 3rd dose – Minister- Sudhakar