ಮೈಸೂರು,ಮಾ,21,2020(www.justkannada.in): ರಾಜ್ಯದಲ್ಲಿ ಹರಡುತ್ತಿರುವ ಮಾರಕ ಕರೋನಾ ವೈರಸ್ ತಡೆಗಟ್ಟಲು ಮೈಸೂರಿನಲ್ಲಿ ಭೀಮಪುತ್ರಿ ಬ್ರಿಗೇಡ್ ಸಂಘಟನೆಯಿಂದ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಭೀಮಪುತ್ರಿ ಬ್ರಿಗೇಡ್ ನ ಸಂಸ್ಥಾಪಕ ಅಧ್ಯಕ್ಷೆ ರೇವತಿ ರಾಜ್ ನೇತೃತ್ವದಲ್ಲಿ ನಡೆದ ಜನಜಾಗೃತಿ ಅಭಿಯಾನ ನಡೆಯಿತು. ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದ ಆಸುಪಾಸಿನಲ್ಲಿ ಭೀಮಪುತ್ರಿ ಬ್ರೆಗೇಡ್ ನ ಸದಸ್ಯರು ಉಚಿತವಾಗಿ ಮಾಸ್ಕ್ ಸ್ಯಾನಿಟೈಸರ್ ವಿತರಿಸಿ ಜನಜಾಗೃತಿ ಮೂಡಿಸಿದರು.
ತಳ್ಳುವಗಾಡಿ ವ್ಯಾಪಾರಸ್ಥರು, ಸಂಚಾರಿ ಪೋಲೀಸರು, ಹೋಂ ಗಾರ್ಡ್ ಗಳು ಸೇರಿದಂತೆ ಸಾರ್ವಜನಿಕರಿಗೆ ಭೀಮಪುತ್ರಿ ಬ್ರಿಗೇಡ್ ನ ಕಾರ್ಯಕರ್ತರು, ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಗಳನ್ನು ವಿತರಿಸಿದರು. ಬಳಿಕ ಮೈಸೂರಿನ ಭಾರತ್ ನಗರಕ್ಕೆ ತೆರಳಿ ಜನಜಾಗೃತಿ ನಡೆಸಿದರು. ದಿನೇ ದಿನೇ ಮಾರಕ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು ಈ ಹಿನ್ನೆಲೆ ಜನಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ.
Key words: Mass- awareness -campaign – Mysore – deadly- coronavirus