ಬೆಂಗಳೂರು, ಆಗಸ್ಟ್ 02, 2020 (www.justkannada.in): ರಷ್ಯಾ ಕೊರೊನಾ ಲಸಿಕೆಯೊಂದರ ಪ್ರಯೋಗವನ್ನು ಪೂರ್ಣಗೊಳಿಸಿ ಅಕ್ಟೋಬರ್ ನಲ್ಲಿ ದೇಶಾದ್ಯಂತ ಸಾಮೂಹಿಕ ಲಸಿಕೆ ನೀಡಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ರಷ್ಯಾ ಆರೋಗ್ಯ ಸಚಿವ ಮಿಖಾಯಿಲ್ ಮುರಶೊ, ಈಗಾಗಲೇ ರಷ್ಯಾದಲ್ಲಿ ಮಾನವನ ಮೇಲೆ ಪ್ರಯೋಗಿಸುವ ಹಂತಗಳನ್ನು ಪೂರ್ಣಗೊಳಿಸಲಾಗಿದೆ. ಆರಂಭದಲ್ಲಿ ವೈದ್ಯರು ಮತ್ತು ಶಿಕ್ಷಕರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಆಕ್ಟೋಬರ್ ನಿಂದ ದೇಶಾದ್ಯಂತ ಸಾಮೂಹಿಕ ಲಸಿಕೆ ಅಭಭಿಯಾನ ನಡೆಸಲಾಗುವುದು ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳು ಒಟ್ಟಾರೆ 100 ಕ್ಕೂ ಹೆಚ್ಚು ಲಸಿಕೆಗಳು ಪ್ರಯೋಗದಲ್ಲಿ ತೊಡಗಿವೆ.