ಬೆಂಗಳೂರು,ಫೆಬ್ರವರಿ,19,2021(www.justkannada.in): ಕುರುಬರ ಸಮಾಜಕ್ಕೆ ಐದು ಅಂಶಗಳ ಬೇಡಿಕೆಗಳು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಇಂದು ಮೌರ್ಯ ವೃತ್ತ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಕುರುಬರ ಸಂಘದ ಪ್ರಭಾರ ಅಧ್ಯಕ್ಷರಾದ ಸುಬ್ರಮಣ್ಯ ,ಮಾಜಿ ಮಹಾಪೌರರು ,ಪ್ರಧಾನ ಕಾರ್ಯದರ್ಶಿಗಳಾದ ಡಿ.ವೆಂಕಟೇಶ್ ಮೂರ್ತಿ ,ಖಚಾಂಚಿ ದೇವರಾಜ ಸುಬ್ಬರಾಯಪ್ಪ ಮತ್ತು ಮಾಜಿ ಮಹಾಪೌರರುಗಳಾದ ರಾಮಚಂದ್ರಪ್ಪ ,ಜೆ.ಹುಚ್ಚಪ್ಪ ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಜಿ.ಕೃಷ್ಣಮೂರ್ತಿ ಮತ್ತು ಕುರುಬರ ಸಂಘದ ಹಿರಿಯ ಮುಖಂಡರಾದ ರಾಜೇಂದ್ರ ಸಣ್ಣಕ್ಕಿ ,ಅಮೃತ್ ಚಿನ್ನಕೋಡ್ ,ಮರಿಸ್ವಾಮಿ ,ಸೋಮಶೇಖರ್ ಹಾಗೂ ವಿವಿಧ ಜಿಲ್ಲೆಗಳಿಂದ ಕುರುಬ ಸಮುದಾಯದ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್.ಟಿ) ಮೀಸಲಾತಿಗೆ ಸೇರ್ಪಡ ಮತ್ತು ಕುಲಶಾಸ್ತ್ರ ಅಧ್ಯಯನವನ್ನು ಕೊಡಲೆ ತರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
ಜಾತಿ ಸಿಂಧುತ್ವ ಆದೇಶವನ್ನು ಯಥಾಸ್ಥಿತಿ ಮುಂದುವರಿಕೆ ,ಕಾಂತರಾಜುರವರು ಜಾತಿ ಜನಗಣತಿ ಸಮೀಕ್ಷೆ ವರದಿಯನ್ನು ಕೊಡಲೆ ಬಿಡುಗಡೆ ,2ಎ ಮೀಸಲಾತಿ ಪಟ್ಟಿಗೆ ಮುಂದುವರೆದ ಜಾತಿಗಳನ್ನು ಸೇರಿಸಬಾರದು ಮತ್ತು ಕುರುಬರ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿ 500ಕೋಟಿ ಅನುದಾನ ಮೀಸಲು ಇಡಬೇಕು ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು.
54 ವಿಧಾನಸಭಾ ಕ್ಷೇತ್ರದಲ್ಲಿ 12 ಲೋಕಸಭಾ ಕ್ಷೇತ್ರದಲ್ಲಿ ಕುರುಬರ ಸಮುದಾಯವು ನಿರ್ಣಾಯಕ ಪಾತ್ರ ವಹಿಸಿ ಯಾವುದೇ ಸರ್ಕಾರ ಬರಲು ಕುರುಬ ಸಮುದಾಯ ಬಹುಮುಖ್ಯ ಪಾತ್ರ ವಹಿಸುತ್ತಿದೆ. ನಮ್ಮ ಬೇಡಿಕೆಗಳು ರಾಜ್ಯ ಸರ್ಕಾರ ಗಂಭೀರವಾಗಿ ಗಮನಿಸಬೇಕು ಕಡೆಗಣನೆ ಮಾಡಿದರೆ ಉಗ್ರ ಹೋರಟ ಮಾಡುವುದಾಗಿ ಮುಖಂಡರುಗಳು ಕರೆ ನೀಡಿದರು.
Key words: Massive –protests- demanding – fulfillment – five elements – kuruba community