ಮೈಸೂರು, ಆಗಸ್ಟ್,03,2020(www.justkannda.in) ; ಶೀಘ್ರದಲ್ಲಿ ರೈಲ್ವೆ ಹಳಿ ಪಕ್ಕದಲ್ಲಿರುವ ಮೇದರ್ ಬ್ಲಾಕ್ ಮತ್ತು ಯಾದವಗಿರಿ ಸ್ಲಂಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಗುರುವಾರ ನಗರದ ಹೊರವಲಯದ ಹೊಂಗಳ್ಳಿಯಲ್ಲಿ ನೂತನವಾಗಿ “ಅಮೃತ್ ಯೋಜನೆಯಡಿ” ನಿರ್ಮಾಣವಾಗುತ್ತಿರುವ ಜಲ ಶುದ್ದೀಕರಣ ಘಟಕ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.
ಬಳಿಕ ಮೈಸೂರು ಹಳೇ ಕೆಸರೆಯಲ್ಲಿ ಸ್ಲಮ್ ಬೋರ್ಡ್ ವತಿಯಿಂದ ನಿರ್ಮಾಣಗೊಂಡಿರುವ ಮನೆಗಳ ವೀಕ್ಷಿಸಿ, ಶೀಘ್ರದಲ್ಲಿ ರೈಲ್ವೆ ಹಳಿ ಪಕ್ಕದಲ್ಲಿರುವ ಮೇದರ್ ಬ್ಲಾಕ್ ಮತ್ತು ಯಾದವಗಿರಿ ಸ್ಲಂಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.
ಮುಂದಿನ ದಿನಗಳ ಮೈಸೂರು ರೈಲ್ವೆ ನಿಲ್ದಾಣ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಅಲ್ಲಿನ ಸ್ಲಂಗಳನ್ನು ತೆರವುಗೊಳಿಸಿ ಅವರಿಗೆ ಬೇರೆಡೆ ವ್ಯವಸ್ಥೆ ಕಲ್ಪಿಸಲಾಗುವುದು. ಅವರಿಗೆ ಬೇಕಾದ ಸೂಕ್ತ ಮೂಲ ಸೌಕರ್ಯಗಳನ್ನು ನೀಡಿ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.
key words ; Mather-Black-Yadavagiri-sluggage-evacuation-Statement-MP Pratapa shimha