ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟಕ್ಕೆ ಪ್ರಚೋಧನೆ ನೀಡಿದ್ದ ಆರೋಪಿ ಮೌಲ್ವಿ ಸೆರೆ.

The accused maulvi has been arrested for inciting stone pelting at the police station.

ಮೈಸೂರು, ಫೆ.೨೦, ೨೦೨೫: ಇಲ್ಲಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ‌ ಕಲ್ಲು ತೂರಾಟ‌‌ ಪ್ರಕರಣಕ್ಕೆ ಪ್ರಚೋಧನೆ ನೀಡಿ ತಲೆ ಮರೆಸಿಕೊಂಡಿದ್ದ ಆರೋಪಿ ಮೌಲ್ವಿ ಮುಫ್ತಿ ಮುಷ್ತಾಕ್‌ ಕಡೆಗೂ ಬಂಧನ.

ಘಟನೆಗೂ ಮುನ್ನಾ ಪ್ರಚೋದನಾಕಾರಿ ಭಾಷಣ ಮಾಡಿದ್ದ ಆರೋಪಿ ಮೌಲ್ವಿ ಮುಫ್ತಿ ಮುಷ್ತಾಕ್ ಮಕ್ಬೋಲಿ ಬಂಧನಕ್ಕೆ ಹೆಚ್ಚಿದ ಒತ್ತಡ.  ಕಲ್ಲು ತೂರಾಟ ಘಟನೆ ಬಳಿಕ ತಲೆ‌ಮರೆಸಿಕೊಂಡಿದ್ದ ಆರೋಪಿ. ಸಿಸಿಬಿ ಪೊಲೀಸರ ಸತತ ಕಾರ್ಯಾಚರಣೆ ಬೆನ್ನಲ್ಲೇ ಸಿಕ್ಕಿ ಬಿದ್ದಿರುವ ಆರೋಪಿ.

ಕಲ್ಲು ತೂರಾಟಕ್ಕೆ ಭಾಷಣದ ಮೂಲಕ ಪ್ರಚೋದನೆ ನೀಡಿದ ಆರೋಪಕ್ಕೆ ಗುರಿಯಾಗಿರುವ ಮೌಲ್ವಿ.ಇದೀಗ ಪೊಲೀಸರ ಅತಿಥಿ.

ಬಿಜೆಪಿ ಅಸಮಧಾನ:

ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ, ಪೊಲೀಸರಿಗೆ ಸರ್ಕಾರ ಹಾಗೂ ಗೃಹ ಇಲಾಖೆಯಿಂದ ಒತ್ತಡ ಇದೆ. ನಾವು ಹೋರಾಟ ಮಾಡ್ತೀವಿ ಅಂದಿದ್ದಕ್ಕೆ ಮೌಲ್ವಿಯನ್ನ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿಲ್ಲ.  ನಾನು ಕೂಡ ಇಂದು ಪೊಲೀಸ್ ಕಮಿಷನರ್ ಭೇಟಿ ಆಗುತ್ತೇನೆ. ಘಟನೆ ಸಂಬಂಧ ನಿಮ್ಮ ಜೊತೆ ನಾವು, ಸಾರ್ವಜನಿಕರು ಇದ್ದೇವೆ ಎಂದು ತಿಳಿಸುತ್ತೇವೆ ಎಂದು ಹೇಳಿಕೆ ನೀಡಿದ ಬಿಜೆಪಿ ಶಾಸಕ ಶ್ರೀವತ್ಸ .

key words: The accused, maulvi, arrested, inciting stone pelting, police station.

SUMMARY:

The accused maulvi has been arrested for inciting stone pelting at the police station.

Maulvi Mufti Mushtaq, the accused in the stone-pelting case at Udayagiri police station, has finally been arrested.