ಬೆಂಗಳೂರು,ಡಿಸೆಂಬರ್,16,2020(www.justkannada.in) : ವಿಚಾರಪರ ಕಾರ್ಯಕ್ರಮಗಳಿಂದ ಜಾಗೃತಿ ಮೂಡಲಿ, ಜನಸಾಮಾನ್ಯರು ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳವಂತಾಗಲಿ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬುಧವಾರ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಂಶೋಧನಾ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ‘’ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ’’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಸ್ತವವಾಗಿ ನಮ್ಮ ಕರ್ನಾಟಕದ ಹನ್ನೆರೆಡನೆಯ ಶತಮಾನದಲ್ಲಿಯೇ ಅಪಾರವಾದ ಮಾನವ ಸಂವೇದನೆಯ ಸಾಂಸ್ಕೃತಿಕ ಹೋರಾಟ, ಸಾಮಾಜಿಕ ಹೋರಾಟ, ಮಾನವತೆಯ ಸ್ಥಾಪನೆಯ ಹೋರಾಟ ಅತ್ಯಂತ ಹೃದಯಂಗಮವಾಗಿ ನಡೆದಿದೆ ಎಂದರು.
ಕನ್ನಡದ ರಸಋಷಿ ಕುವೆಂಪು ಅವರು ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ್ದಾರೆ. ಸತ್ಯಸಂಧತೆಯ ಅಹಿಂಸಾ ನಿಲುವಿನ ಸಂತ ವ್ಯಕ್ತಿತ್ವದವರಾಗಿರುವ ಮಹಾತ್ಮ ಗಾಂಧೀಜಿ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹನೀಯರುಗಳು, ಸಮಗ್ರ ಮಾನವ ಜನಾಂಗಗಳ ಹಿತ ಬಯಸಿ ಹೋರಾಡಿ ಮಾನವ ಹಕ್ಕುಗಳ ಬಗೆಗೆ ಮಹಾನ್ ಜಾಗೃತಿಯನ್ನು ಮೂಡಿಸಿದ್ದಾರೆ ಎಂದು ಸ್ಮರಿಸಿದರು.
ಈ ದೃಷ್ಟಿಯಿಂದ ಭಾರತದ ಮಣ್ಣಿನಲ್ಲಿ ಈ ಬಗೆಯ ಮಾನವತೆಯ ಹಲವಾರು ಚಿಂತನೆಗಳು, ವಿಚಾರಧಾರೆಗಳು ಉದ್ಭವಗೊಂಡಿರುವುದು ಬಹು ಹೆಮ್ಮೆಯ ಸಂಗತಿಯಾಗಿದೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ, ಸಮಾನತೆಯ ಸ್ಥಾಪನೆಯ ಹಿನ್ನೆಲೆಯಲ್ಲಿ, ಹಲವಾರು ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಶ್ರಮಿಸುತ್ತಿವೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಂಶೋಧನಾ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
English summary….
Let there be awareness through thoughtful programs: VC Prof. G. Hemanth Kumar
Bengaluru, Dec. 16, 2020 (www.justkannada.in): “I wish there will be more awareness and symmetry among the people through thoughtful programs,” opined Prof. G. Hemanth Kumar, Vice-Chancellor, University of Mysore.
He inaugurated the ‘Celebration of World Human Rights’ programme organised by the Human Rights Protection and Corruption Prevention Institute, in association with the District Legal Services Forum, and Research Students Association, held at the Rani Bahaddur Auditorium today.
In his address, he said, “in Karnataka especially there have been a lot of struggles to bring sensitivity among human beings, cultural, social equality in the 12th Century itself. Kuvempu gave his message of humanity to the entire world. Leaders like Mahatma Gandhiji and Dr. B.R. Ambedkar had created awareness among the people on human rights during their time, with a view of establishing peace and humanity on earth.”
He appreciated the efforts of several organisations and associations in establishing social equality and justice in society.
Keywords: University of Mysore/ Celebration of World Human Rights/
key words : May-raise-awareness-through-seminar-programs-Chancellor- Prof. G.Hemant Kumar