ಅಪಘಾತದಲ್ಲಿ MBBS ವಿದ್ಯಾರ್ಥಿನಿ ಸಾವು

ಚಾಮರಾಜನಗರ,ಡಿಸೆಂಬರ್,12,2024 (www.justkannada.in):  ಗೂಡ್ಸ್ ಆಟೋ-ದ್ವಿಚಕ್ರ ನಡುವೆ ವಾಹನ ಡಿಕ್ಕಿಯಾಗಿ ಕೇರಳದ ಎಂಬಿಬಿಎಸ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ  ಮೈಸೂರು- ಊಟಿ ಹೆದ್ದಾರಿಯ  ಚಿಕ್ಕಾಟಿ ಗೇಟ್ ಬಳಿ ನಡೆಸಿದೆ.

ಮೈಸೂರು ಸರ್ಕಾರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ. ಕೇರಳದ  ಮಹಮ್ಮದ್ ಹಬೀಬ್ ಫಾರನ್ (22) ಮೃತಪಟ್ಟವರು. ಜೊತೆಗಿದ್ದ ಆದರ್ಶ ಎಂಬ ಯುವಕನಿಗೆ  ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತನ್ನ ಸ್ನೇಹಿತ ಆದರ್ಶ್ ಜೊತೆ   ಹೋಂಡಾ ಆ್ಯಕ್ಟಿವ್‌ದಲ್ಲಿ ಕೇರಳಕ್ಕೆ ತೆರಳುವಾಗ ಗುಂಡ್ಲುಪೇಟೆ ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಗೂಡ್ಸ್ ಆಟೋಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.  ಸ್ಥಳಕ್ಕೆ ಬೇಗೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: MBBS, student, dies, accident