ಮೈಸೂರು,ಡಿಸೆಂಬರ್,12,2024 (www.justkannada.in): ಮೈಸೂರು ಮಹಾನಗರ ಪಾಲಿಕೆಯು ರಸ್ತೆ ವಿಭಜಕಗಳ ಸಿಂಗಾರಕ್ಕೆ ಮುಂದಾಗಿದ್ದು ರಸ್ತೆ ಡಿವೈಡರ್ ಮಧ್ಯೆ ಇರುವ ಖಾಲಿ ಜಾಗದಲ್ಲಿ ಬಗೆ ಬಗೆಯ ಹೂವು ಗಿಡಗಳ ಬೆಳೆಸುತ್ತಿದೆ.
ನಗರದ ಕುಕ್ಕರಹಳ್ಳಿ ಜಂಕ್ಷನ್ ನಿಂದ ಆಂದೋಲನ ವೃತ್ತ, ದಟ್ಟಗಳ್ಳಿವರೆಗೆ ಗಿಡಗಳ ನೆಡುವ ಕಾರ್ಯ ನಡೆಯುತ್ತಿದ್ದು ಇದಕ್ಕಾಗಿ ಪಾಲಿಕೆ 70 ಲಕ್ಷ ರೂ. ವೆಚ್ಚ ಮಾಡುತ್ತಿದೆ. ಎರಡು ವರ್ಷಗಳ ಕಾಲ ಗಿಡನೆಟ್ಟು ನಿರ್ವಹಣೆ ಮಾಡಲು ಖಾಸಗಿ ವ್ಯಕ್ತಿಗೆ ಟೆಂಡರ್ ನೀಡಲಾಗಿದೆ. ಪಾಲಿಕೆಯು ಹಂತ ಹಂತವಾಗಿ 70 ಲಕ್ಷ ಅನುದಾನ ನೀಡಲಿದ್ದು, ಟೆಂಡರ್ ತೆಗೆದುಕೊಂಡ ರಾಮಶೆಟ್ಟಿ ಎಂಬುವವರಿಂದ ಗಿಡ ನೆಡುವ ಕೆಲಸ ಆರಂಭವಾಗಿದೆ.
ಈಗಾಗಲೇ ನಗರದ ಕುಕ್ಕರಹಳ್ಳಿ ಕೆರೆ ಜಂಕ್ಷನ್ ನಿಂದ ದಟ್ಟಗಳ್ಳಿ ರಿಂಗ್ ರಸ್ತೆವರೆಗೆ ಸುಮಾರು 4 ಕಿ.ಮೀ ರಸ್ತೆಯಲ್ಲಿ ಗಿಡಗಳನ್ನ ನೆಡಲಾಗುತ್ತಿದ್ದು ಸುಮಾರು 24 ಬಗೆ ಬಗೆಯ ಹೂವು ಗಿಡಗಳು,ಅಲಂಕಾರಿಕ ಸಸ್ಯಗಳ ನೆಡುವ ಕೆಲಸ ಪ್ರಗತಿಯಲ್ಲಿದೆ.
ಸುಮಾರು 29 ಸಾವಿರ ಗಿಡಗಳನ್ನು ಕೊಟ್ಟಿದ್ದಾರೆ. ಅವು ಎಲ್ಲಿತನಕ ಆಗುತ್ತೆ ಅಲ್ಲಿಯ ತನಕ ನೆಡುತ್ತೇವೆ. ಕುಕ್ಕರಹಳ್ಳಿ ಜಂಕ್ಷನ್ ನಿಂದ ಆಂದೋಲನ ಸರ್ಕಲ್ ವರೆಗೆ ಸದ್ಯಕ್ಕೆ ಕೆಲಸ ಮಾಡುತ್ತೇವೆ. ಮುಂದೆ ಹೆಚ್ಚುವರಿ ವಿಸ್ತರಣೆ ಮಾಡಿದರೆ ದಟ್ಟಗಳ್ಳಿ ರಿಂಗ್ ರಸ್ತೆವರೆಗೂ ಮಾಡಲಾಗುತ್ತದೆ ಎಂದು ರಾಮಶೆಟ್ಟಿ ಮಾಹಿತಿ ನೀಡಿದ್ದಾರೆ.
Key words: Mysore City Corporation, decorate, road dividers