ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಆಗ್ರಹಿಸಿ ಮಾ.5 ರಂದು ಪ್ರತಿಭಟನೆ

ಮೈಸೂರು,ಮಾರ್ಚ್,3,2025 (www.justkannada.in): ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹೋರಾಟ ಸಮಿತಿ ವತಿಯಿಂದ  ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಡೆಸುವಂತೆ ಆಗ್ರಹಿಸಿ ಮಾ.5 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡುತ್ತಿರುವ ವಿಷಯವಾಗಿ ಕೂಡಲೇ ಮೈ‌.ನ‌.ಪಾ ಚುನಾವಣೆ ಮಾಡಬೇಕೆಂದು ಆಗ್ರಹಿಸಿ  ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಗರದ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜಲದರ್ಶಿನಿ ಸಭಾಂಗಣದಲ್ಲಿ ಸಭೆಯನ್ನು ನಡೆಸಲಾಯಿತು.

05/03/2025 ರಂದು ಬೆಳಿಗ್ಗೆ 11 ಗಂಟೆಯಿಂದ ಮಹಾನಗರಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ಮಾಡುವುದು.ಮೊಹಲ್ಲಾಗಳಲ್ಲಿ ಕರಪತ್ರಗಳನ್ನು ಮಾಡಿಸಿ  ಹಂಚುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ & ಉಸ್ತುವಾರಿ ಸಚಿವರ ಭೇಟಿಯನ್ನು ಮಾಡುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಯುತು.

ಈ ಸಭೆಯಲ್ಲಿ ಇತಿಹಾಸ ತಜ್ಞರು ಫ್ರೊ.ನಂಜರಾಜ ಅರಸ್ , ಸೋಸಲೆ ಸಿದ್ದರಾಜು , ಅರವಿಂದ್ ಶರ್ಮ ,ಸೋಮರಾಜ ಅರಸು, ಪುಟ್ಟನಂಜಯ್ಯ ದೇವನೂರು , ಆಮ್ ಆದ್ಮಿ ಪಕ್ಷದ ರಾಮಯ್ಯ ರವರು, ಮಾ.ಸ ಪ್ರವೀಣ್, ನಾಗೇಂದ್ರ , ಎಂ.ಎಫ್.ಕಲೀಂ ರವರು, ಆದರ್ಶ ಅರಸ್ ರವರು, ಯಮುನಾ , ಶ್ರೀವಾರಿ ನಾಗರಾಜ್ , ಸುರೇಶ್ ಬಾಬು , ಕೆ ಆರ್ ಎಸ್ ಪಕ್ಷದ ಮುಖಂಡರು , ಬಿ ಎಸ್ ಪಿ ಪಕ್ಷದ ಮುಖಂಡರು ಆಮ್ ಆದ್ಮಿ ಪಕ್ಷದ ಮುಖಂಡರು , ಎಸ್ ಡಿ ಪಿ ಐ ಪಕ್ಷದ ಮುಖಂಡರು ಸಿ ಪಿ ಐ ಹಾಗು ಕಾರ್ಮಿಕ ಸಂಘಟನೆಯ ಮುಖಂಡರು ಪ್ರಮುಖವಾಗಿ ಭಾಗವಹಿಸಿದ್ದರು.

Key words: Protest, demanding Mysore City Corporation, elections