ಮೈಸೂರು ಮಹಾನಗರ ಪಾಲಿಕೆ 878 ಕೋಟಿ ರೂ. ಬಜೆಟ್ ಮಂಡನೆ : ಆನ್ ಲೈನ್ ಮೂಲಕ ತೆರೆಗೆ ಸಂಗ್ರಹಕ್ಕೆ ಗ್ರೀನ್ ಸಿಗ್ನಲ್.

 

ಮೈಸೂರು, ಮೇ 18, 2020 : (www.justkannada.in news ) ಆನ್ ಲೈನ್ ಮೂಲಕ ತೆರೆಗೆ ಸಂಗ್ರಹಕ್ಕೆ ಗ್ರೀನ್ ಸಿಗ್ನಲ್. ಈ ಬಾರಿ 878 ಕೋಟಿ ರೂ. ಮೊತ್ತದ ಬೃಹತ್ ಆಯವ್ಯಯ ಮಂಡನೆ. ಕಳೆದ ಬಾರಿಗಿಂತ ಆಯವ್ಯಯದ ಮೌಲ್ಯ ಹೆಚ್ಚಿಸಿಕೊಂಡ ನಗರ ಪಾಲಿಕೆ.

ಮೇಯರ್ ತಸ್ನೀಂ, ಉಪಮೇಯರ್ ಶ್ರೀಧರ್ ಹಾಗೂ ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಸೋಮವಾರ ಬಜೆಟ್ ಮಂಡಿಸಲಾಯಿತು. ಬಜೆಟ್ ಮಂಡನೆಗೂ ಮುನ್ನ ದಿವಂಗತ ಹಿರಿಯ ಸಾಹಿತಿ ನಿಸಾರ್ ಅಹಮ್ಮದ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಪಾಲಿಕೆ ಸದಸ್ಯರು. ಬಳಿಕ ಮೈಸೂರು ಕೊರೊನಾ ಮುಕ್ತ ಮಾಡಲು ಹೋರಾಡಿದ ಎಲ್ಲಾ ಕೊರೊನಾ ವಾರಿಯರ್ಸ್ಗೂ ಅಭಿನಂದನೆ ಸಲ್ಲಿಕೆ.

MCC gave green signal to Online Property Tax Payment System.

ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ನಿರ್ಮಲರಿಂದ ಬಜೆಟ್ ಭಾಷಣ. 45ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ. ಬಜೆಟ್ ಭಾಷಣದ ಒಟ್ಟಾರೆ ಸಾರಂಶ….

ಉದ್ದಿಮೆ ಪರವಾನಿಗೆಯಿಂದ 8 ಕೋಟಿ ಆದಾಯ ನಿರೀಕ್ಷೆ. ಪಾಲಿಕೆ ಆಸ್ತಿಗಳಿಂದ 2.93 ಕೋಟಿ ಬಾಡಿಗೆ ನಿರೀಕ್ಷೆ. ಪಾಲಿಕೆ ಬೊಕ್ಕಸ ತುಂಬಿಸಲು ವಿನೂತನ ಪ್ರಯತ್ನ. ಬಜೆಟ್ ನಲ್ಲಿ ದೇವರಾಜ ಅರಸು ರಸ್ತೆ ಅಭಿವೃದ್ಧಿಗೆ 5ಕೋಟಿ ಅನುದಾನ.

ಆನ್ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ.
ಮಹಾರಾಣಿ ಕಾಲೇಜಿನಿಲ್ಲಿ ಪಿಂಕ್ ಶೌಚಾಲಯ ವ್ಯವಸ್ಥೆಗೆ 25ಲಕ್ಷ ಅನುದಾನ.
ಸಿವೇಜ್ ಫಾರಂ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ಮುಕ್ತಗೊಳಿಸಿ ಉದ್ಯಾನವನ ನಿರ್ಮಾಣ ಮಾಡಲು 2ಕೋಟಿ.
ಕೊರೊನಾ ವಾರಿಯರ್ಸ್ಗೆ ಪೌರ ಸನ್ಮಾನಕ್ಕಾಗಿ 50ಲಕ್ಷ ಮೀಸಲು.
ಮಳೆ ನೀರು ಶುದ್ದೀಕರಿಸಿ ಪರಿಸರ ಸ್ನೇಹಿ ತಂತ್ರಜ್ಞಾನ ಬಳಕೆಗೆ 4ಕೋಟಿ ಮೀಸಲು.
ಸಾರ್ವಜನಿಕ ಸ್ಥಳಗಳಲ್ಲಿ ವೈ-ಪೈ ಅಳವಡಿಸಲು 2ಲಕ್ಷ ಮೀಸಲು.
ಕೋವಿಡ್-19 ಹರಡದಂತೆ ತಡೆಗಟ್ಟಲು 6.5ಕೋಟಿ ಸಹಾಯ ನಿಧಿ ಮೀಸಲು.
ಎಸ್,ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೋಡಲು ಜ್ಞಾನಸಿರಿ ಯೋಜನೆಗೆ 5ಲಕ್ಷ ಮೀಸಲು.
ಸೈನಿಕರಿಗೆ ಧನಸಹಾಯ, ಸ್ಮಾರ್ಟ್ ಎಲ್.ಇ.ಡಿ ದೀಪಗಳ ಅಳವಡಿಕೆ, ಯೋಗಲಕ್ಷ್ಮಿ ಯೋಜನೆ, ವಾಟರ್ ಟ್ಯಾಂಕ್ ನಿರ್ಮಾಣ, ಪಾರ್ಕ್-ಸ್ಮಶಾನ ಅಭಿವೃದ್ಧಿ ಸೇರಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ

MCC gave green signal to Online Property Tax Payment System.

ಜನಪ್ರತಿನಿಧಿಗಳ ಗೈರು :

ಬಜೆಟ್ ಮಂಡನೆ ವೇಳೆ ಗೈರಾದ ಶಾಸಕರು, ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರು. ಬಜೆಟ್ ಮಂಡನೆ ವೇಳೆ ಭಾಗಿಯಾಗಲು ಜನ ಪ್ರತಿನಿಧಿಗಳ ನಿರಾಸಕ್ತಿ. ಕೇವಲ ಅಭಿವೃದ್ಧಿ ಮಾತಿಗಷ್ಟೇ ಸೀಮಿತವಾಯ್ತು ನಾಯಕರ ನಡೆ. ಅಧಿಕಾರ ಹಿಡಿಯಲು ತಂತ್ರ ರೂಪಿಸಿದ್ದ ಜನನಾಯಕರು ಇಂದು ಗೈರು. ಪಾಲಿಕೆ ಬಗ್ಗೆ ನಾಯಕರಲ್ಲಿ ಉಂಟಾಯ್ತ ತಿರಸ್ಕಾರ ಮನೋಭಾವ.

ಶ್ಲಾಘನೆ :

ಪಾಲಿಕೆ ಬಜೆಟ್ ಬಗ್ಗೆ‌ ವಿರೋಧ ಪಕ್ಷದ ನಾಯಕರಿಂದ ಶ್ಲಾಘನೆ. ಮೊದಲ ಭಾರಿಗೆ ಉತ್ತಮ ಬಜೆಟ್ ನೀಡಿದ್ದಾರೆ. ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಜನ ಉಪಯೋಗಿ ಕಾರ್ಯಕ್ರಮ ಗಳನ್ನು ರೂಪಿಸದ್ದಾರೆ. ಅನ್ ಲೈನ್ ತೆರಿಗೆ ಪಾವತಿ ಯೋಜನೆ ಆಗತ್ಯ ಕಾರ್ಯಕ್ರಮ ಆಗಿದೆ. ಈ ಸಾಲಿನಲ್ಲಿಯೇ ಎಲ್ಲಾ ಕಾರ್ಯಕ್ರಮ ಜಾರಿ ಮಾಡಲು ಮುಂದಾಗಿ. ಬಜೆಟ್ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸುಬ್ಬಯ್ಯ ಹೇಳಿಕೆ‌.

 

key words : MCC- Online Property Tax Payment System.-mysore-corporation

Mysore city corporation gave  green signal for tax collection online. 878 crore Huge budget this time. MCC gave green signal to Online Property Tax Payment System.