ಮೈಸೂರು ಜಿಲ್ಲಾ ಪತ್ರಕರ್ತರ ಸಂಘ: ನೂತನ ಅಧ್ಯಕ್ಷರಾಗಿ ಕೆ.ದೀಪಕ್‌ ಆಯ್ಕೆ.

Mysore district journalist association election K.Deepak elected as president

 

ಮೈಸೂರು, ಜು,15,2024: (www.justkannada.in news) ನಗರದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಕೆ.ದೀಪಕ್‌ ಆಯ್ಕೆಗೊಂಡಿದ್ದಾರೆ.

ಭಾನುವಾರ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯಿತು. ಈ ವೇಳೆ  ಕೆ.ದೀಪಕ್‌ ಅವರು ಹೆಚ್ಚಿನ ಮತಗಳನ್ನು ಪಡೆದ ವಿಜಯಿಯಾದರು. ಒಟ್ಟು ೩೯೨ ಮಂದಿ ಮತದಾನದಲ್ಲಿ ಭಾಗವಹಿಸಿದ್ದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ತಂಡ ಹೀಗಿದೆ…

ಅಧ್ಯಕ್ಷ- ಕೆ ದೀಪಕ್ , ಪ್ರಧಾನ ಕಾರ್ಯದರ್ಶಿ- ಧರ್ಮಾಪುರ ನಾರಾಯಣ್ , ನಗರ ಉಪಾಧ್ಯಕ್ಷ –

ರವಿ ಪಾಂಡವಪುರ, ಗ್ರಾಮಾಂತರ ಉಪಾಧ್ಯಕ್ಷ – ಹೆಚ್ ಎಸ್ ವೆಂಕಟಪ್ಪ , ಕಜಾಂಜಿ -ಸುರೇಶ್ ,

ಗ್ರಾಮಾಂತರ ಕಾರ್ಯದರ್ಶಿ – ದಾರಾ ಮಹೇಶ್ , ನಗರ ಕಾರ್ಯದರ್ಶಿ – ಲಕ್ಷ್ಮಿ ನಾರಾಯಣ್ ಯಾದವ್.

 

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2024 – 2026ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರು

ಎಂ.ಟಿ ಯೋಗೇಶ್ , ಕವಿತಾ, ಹನಗೋಡ್ ನಟರಾಜ್ , ರೋಜಾ ಮಹೇಶ್ , ನಾಣಿ ಹೆಬ್ಬಾಳ್ , ರವಿ ಚಂದ್ರ ಹಂಚ್ಯಾ, ಹಂಪಾ ನಾಗರಾಜ್, ಸೋಮ‌ಶೇಖರ್,  ಶಿವಣ್ಣ, ಸತೀಶ್, ದೊಡ್ಡಹುಂಡಿ ರಾಜಣ್ಣ , ಹುಲ್ಲಹಳ್ಳಿ ಮೋಹನ್ , ಪುನೀತ್ , ರಾಜು ಕಾರ್ಯ,  ವಿಜಿಯಣ್ಣ .

key words: Mysore district journalist association, MDJ, election, K.Deepak , elected as president