ಮಾಧ್ಯಮ ಅಕಾಡೆಮಿಯಿಂದ ಪ್ರಥಮ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ

ಬೆಂಗಳೂರು, ಫೆಬ್ರುವರಿ 5,2025 (www.justkannada.in):  ಕರ್ನಾಟಕ ಮಾಧ್ಯಮ ಅಕಾಡೆಮಿಯು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸುದ್ದಿ ಛಾಯಾಚಿತ್ರಗ್ರಾಹಕರಿಗಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಿದೆ.

ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಮೊದಲ ಮೂರು ಛಾಯಾಚಿತ್ರಗಳಿಗೆ ಕ್ರಮವಾಗಿ 35,000/- ರೂ., 25,000/- ರೂ. ಹಾಗೂ 15,000/- ರೂ. ನಗದು ಬಹುಮಾನ ನೀಡಲಾಗುವುದು. ಆಯ್ದ ಅತ್ಯುತ್ತಮ ಛಾಯಾಚಿತ್ರಗಳನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಮಾರ್ಚ್‌ ತಿಂಗಳಲ್ಲಿ ಅಕಾಡೆಮಿ ವತಿಯಿಂದ ಏರ್ಪಡಿಸಲಾಗುವ ಸುದ್ದಿ ಛಾಯಾಗ್ರಹಣ ಕುರಿತ ಕಾರ್ಯಾಗಾರದ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಇರಿಸಲಾಗುವುದು.

ಸ್ಪರ್ಧೆಯ ಷರತ್ತುಗಳು:

ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು, ದಿನಾಂಕ :01-01-.202 4 ರಿಂದ 31-01-2025 ರ ಅವಧಿಯಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು.

ಪ್ರತಿ ಸುದ್ದಿ ಛಾಯಾಚಿತ್ರ ಗ್ರಾಹಕರು ತಾವೇ ಚಿತ್ರಿಸಿರುವ ಎರಡು ಸುದ್ದಿ ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸಲ್ಲಿಸಬಹುದು.

ಸುದ್ದಿ ಛಾಯಾಚಿತ್ರಗಳನ್ನು ಚಿತ್ರಿಸಿರುವುದಕ್ಕೆ ಯಾವುದೇ ಭೌಗೋಳಿಕ ಪರಿಮಿತಿ ಇರುವುದಿಲ್ಲ.

ಪ್ರತಿ ಸ್ಪರ್ಧಿಯೂ ಅವರು ಸುದ್ದಿ ಛಾಯಾಚಿತ್ರಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಸಂಪಾದಕರಿಂದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ ಅಥವಾ  ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಕರ್ತರಿಗಾಗಿ ನೀಡುವ Accreditation Card ಹೊಂದಿರುವವರು ಅದರ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು.

ಛಾಯಾಚಿತ್ರಗಳ ಮೇಲೆ ಹೆಸರು, ಶೀರ್ಷಿಕೆ ಹಾಗೂ ವಾಟರ್ ಮಾರ್ಕ್‌ಗಳು ಇರಬಾರದು.

ಸ್ಪರ್ಧೆಗೆ ಕಳಿಸುವ ಛಾಯಾಚಿತ್ರಗಳ ಅಂದರೆ ಡಿಜಿಟಲ್ ಇಮೇಜ್ ಗಳನ್ನುJPEG format ನಲ್ಲಿಮಾತ್ರ ಸಲ್ಲಿಸಬೇಕು.

ಪ್ರದರ್ಶನಕ್ಕೆ ಆಯ್ಕೆಯಾಗುವ ಛಾಯಾಚಿತ್ರಗಳನ್ನು20”x 30” ಅಳತೆಯಲ್ಲಿ ಮುದ್ರಣ  ಮಾಡಿಸಬೇಕಾಗಿರುವುದರಿಂದ ನೀವು ಕಳಿಸುವ ಇಮೇಜ್ ಗಳು 20”x 30” ಅಳತೆಯ ,300 DPI ನಲ್ಲಿದ್ದು ಕನಿಷ್ಠ 5MB ಗಾತ್ರದಲ್ಲಿರಬೇಕು.

ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿರುವ ಚಿತ್ರಗಳನ್ನುಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸುವ ಸುದ್ದಿಛಾಯಾಚಿತ್ರಗಳು ಸಹಜವಾಗಿರಬೇಕು. ಚಿತ್ರದಲ್ಲಿನ ಯಾವುದೇ ಭಾಗವನ್ನುತೆಗೆಯುವುದಾಗಲಿ ಅಥವಾ ಸೇರಿಸುವುದಾಗಲಿ ಮಾಡಿರಬಾರದು.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಛಾಯಾಗ್ರಾಹಕರು mediaacademy.karnataka.gov.in ವೆಬ್ಸೈಟ್ನಲ್ಲಿ ಇರುವ ನಿಗದಿತ ಅರ್ಜಿಯನ್ನು Down load ಮಾಡಿಕೊಂಡು ಭರ್ತಿಮಾಡಿ, ತಮ್ಮ ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಇಮೇಜ್ಗಳನ್ನು photo.karnatakamediaacademy@gmail.com ಇ-ಮೇಲ್ ವಿಳಾಸಕ್ಕೆ ದಿನಾಂಕ: 15-02-2025 ರಂದು ಸಂಜೆ 5:00ಗಂಟೆ ಒಳಗಾಗಿ ಸಲ್ಲಿಸತಕ್ಕದ್ದು. ನಂತರ ಬಂದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

ಸ್ಪರ್ಧೆಗೆ ಬಂದಿರುವ ಛಾಯಾಚಿತ್ರಗಳನ್ನುಪ್ರಶಸ್ತಿಗೆ ಹಾಗೂ ಪ್ರದರ್ಶನಕ್ಕೆಆಯ್ಕೆಮಾಡಲು ಸುದ್ದಿ ಛಾಯಾಗ್ರಹಣ ಕ್ಷೇತ್ರದಲ್ಲಿಅನುಭವ ಹೊಂದಿರುವ ಮೂವರು ತೀರ್ಪುಗಾರರಿದ್ದುಅವರು ತೆಗೆದುಕೊಂಡ ತೀರ್ಮಾನವೇ ಅಂತಿಮವಾಗಿರುತ್ತದೆ.

ಪ್ರಶಸ್ತಿಗೆ ಆಯ್ಕೆಯಾದ ಮೂರು ಛಾಯಾಚಿತ್ರಗಳಿಗೆ ಪ್ರಥಮ ಬಹುಮಾನ: ರೂ.35,000/ ದ್ವಿತೀಯ ಬಹುಮಾನ: ರೂ. 25000, ಹಾಗೂ ತೃತೀಯ ಬಹುಮಾನ: ರೂ.15000ಗಳನ್ನುನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 9448227768 ಹಾಗೂ 9449245980 ನ್ನು ಸಂಪರ್ಕಿಸಬಹುದು.

Key words: photography competition, exhibition, Media Academy