ಬೆಂಗಳೂರು, ಏ.21, 2020 : ( www.justkannada.in news ) ಪಬ್ಲಿಕ್ ಟಿವಿ ರಂಗನಾಥ್ ಅವರ ಬಗ್ಗೆ ನಡೆದಷ್ಟು ವರ್ಬಲ್ ಅಟ್ಯಾಕುಗಳು,ಟ್ರೋಲ್ ಗಳು, ಟೀಕೆಗಳು, ವಿಮರ್ಷೆಗಳು ಬಹುಷಃ ಕರ್ನಾಟಕದ ಯಾವ ಪತ್ರಕರ್ತನ ಮೇಲೂ ನಡೆದಿಲ್ಲ, ಬಹುತೇಕ ಸಂದರ್ಭಗಳಲ್ಲಿ ರಂಗನಾಥ್ ಇವೆಲ್ಲ ನಂಗೆ ಗೊತ್ತೇ ಇಲ್ಲವೇನೋ ಅಂತ ಆಲ್ ರೈಟ್ ಅಂತ ಮುಂದೆ ಹೋಗಿಬಿಡುತ್ತಾರೆ….
ಈ ಕಾರಣಕ್ಕಾದರೂ ರಂಗನಾಥ್ ಡೆಮೋಕ್ರಾಟಿಕ್ ಅನಿಸ್ತಾರೆ ಮತ್ತೆ ಅವರನ್ನು ಪ್ರೀತಿಯಿದಲೋ ದ್ವೇಷ ದಿಂದಲೂ ಜನ ನೋಡ್ತಾಲೇ ಇರ್ತಾರೆ, ಟಿವಿಯಲ್ಲಿ ಕುಳಿತು ಅವರು ಜನರಿಗೆ ಉಗೀತಾರೆ, ಜನ ರೋಸಿಹೋಗಿ ಅವರಿಗೂ ಉಗೀತಾನೆ ಇರ್ತಾರೆ..
ಆದರೆ ಪಬ್ಲಿಕ್ ಟಿ ವಿ ರಂಗನಾಥ್ ತನ್ನ ಸ್ಥಾನ, ಮಾನ, ಪರಿಚಯ ಇನ್ಪುಯನ್ಸ್ ಗಳನ್ನ ಬಳಸಿಕೊಂಡು ಟೀಕೆ ಮಾಡುವವರ ಬಗ್ಗೆ ಕಂಪ್ಲೇಂಟ್ ಬರೆಸಿ ಪರಿಚಿತ ಗೃಹ ಸಚಿವರ ಬೆನ್ನು ಬಿದ್ದು ಕಾನೂನು ಕ್ರಮ ಜರುಗಿಸಿ ಅಂತ ಹೇಳಿದ್ದು ನಾನು ಕಂಡಿಲ್ಲ, ಇಲ್ಲಾ ಕ್ರೈಂ ವರದಿಗಾರ ಬೆನ್ನು ಬಿದ್ದು ಯಾರಿಗೋ ತೊಂದರೆ ಮಾಡಿ ಅರೆಸ್ಟ್ ಮಾಡಿಸಿ, ಸುಳ್ಳೇ ಕೇಸುಗಳನ್ನು ಹಾಕಿಸಿ ವಿಕೃತ ಆನಂದ ಅನುಭವಿಸಿಲ್ಲ.
ಆ ಕಾರಣಕ್ಕಾಗಿ ಸಂಪಾದಕ ಮತ್ತು ಓದುಗರ ನಡುವೆ ನಡುವೆ ನಡೆಯೋ ಸಂವಾದ ಪ್ರಜಾಪ್ರಭುತ್ವಕ್ಕೆ ಯಾವತ್ತೂ ಒಳ್ಳೆಯದು.
ಆದರೆ ಕನ್ನಡದ ಪತ್ರಿಕೆಯೊಂದರ ಸಂಪಾದಕರು ಆ ಪತ್ರಿಕೆಯ ಓದುಗರು ಕಳುಹಿಸಿದ್ದ ಪ್ರಶ್ನೆಗಳಿಗೇ ಕ್ಷುದ್ರಗೊಂಡು ಹಲವಾರು ಮಂದಿಯ ಮೇಲೆ ಸೈಬರ್ ಕ್ರೈಂ ಠಾಣೆಗಳಿಗೆ ದೂರು ನೀಡಿ ಕಿರುಕುಳ ನೀಡಿದ್ದಾರೆ, ಕಾನೂನಿನ ನಿಷ್ಕರ್ಷೆಯಿರಲಿ ಪೋಲೀಸ್ ಠಾಣೆ ಸಾಮಾನ್ಯ ಪಿ ಸಿ ಕೂಡ ಸ್ವೀಕರಿಸಲು ಅರ್ಹವಿಲ್ಲದ ಕಂಪ್ಲೇಂಟ್ ಅನ್ನ ರಾಜ್ಯ ವ್ಯಾಪಿ ಹಲವರ ಮೇಲೆ ಹಾಕಿಸಿದ್ದಾನೆ.ತನ್ನ ಅದೀನ ವರದಿಗಾರರ ಮೇಲೆ ದುಂಬಾಲು ಬಿದ್ದು ಎಲ್ಲರಿಗೂ ತೊಂದರೆ ಕೊಡಿಸುತ್ತಿದ್ದಾನೆ.
ಅಷ್ಟಕ್ಕೂ ಪತ್ರಿಕೆಯ ಓದುಗರು ಸಂಪಾದಕನ ಕೂಡ ಚರ್ಚೆ ಮಾಡಬಾರದೇ, ಮೇಸೇಜು ಕಳಿಸಬಾರದೇ, ಪೇಸ್ ಬುಕ್ಕಲ್ಲಿ ಬರೆಯಬಾರದೆ, ಇನ್ನಾವ ಕಾರಣಕ್ಕೆ ಅವರ ಪತ್ರಿಕೆ ಓದಬೇಕು ಹೇಳಿ…?
ಒಂದು ವೇಳೆ ಯಾರಾದರೂ ನಿಮ್ಮ ಬರಹಕ್ಕೆ ಪ್ರಾಣ ಬೆದರಿಕೆ ಒಡ್ಡಿದರೆ, ಇಲ್ಲಾ ವಯಕ್ತಿಕ ತೇಜೋವದೆ ಮಾಡಿದರೆ ಅವನ್ನೆಲ್ಲ ಶಿಕ್ಷಾರ್ಹ ಅನ್ನ ಬಹುದು ಅದು ಬಿಟ್ಟು ಒಂದು ಪ್ರತಿಕ್ರಿಯೆಯನ್ನು ಸ್ವೀಕರಿಸಲು ಕಷ್ಟವಾದರೆ ಹೇಗೆ…?
ಕೃಪೆ : ಎಂ.ಬಿ.ಶ್ರೀನಿವಾಸಗೌಡ/ ಫೇಸ್ ಬುಕ್
key words : media-journalist-kannada-karnatka-critic-police