ಮೈಸೂರು,ಜುಲೈ,17,2023(www.justkannada.in): ಮಧ್ಯವರ್ತಿ ರಾಜಕೀಯ ಮಾಡುವುದರಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಕ್ಸ್ಪರ್ಟ್. ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾರಣವೇ ಕುಮಾರಸ್ವಾಮಿ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಹೆಚ್.ಡಿ ಕುಮಾರಸ್ವಾಮಿ ಕುರಿತ ದಾಖಲೆಗಳನ್ನ ಬಿಡುಗಡೆ ಮಾಡಿ ಮಾತನಾಡಿದ ಹೆಚ್.ಎ ವೆಂಕಟೇಶ್, ಬಿಜೆಪಿಯಲ್ಲಿ ಉತ್ತಮವಾದ ನಾಯಕನೇ ಇಲ್ಲ. ಎರಡು ತಿಂಗಳಾಯ್ತು, ವಿರೋಧ ಪಕ್ಷದ ನಾಯಕನ ಆಯ್ಕೆಯೇ ಆಗಿಲ್ಲ. ಇದು ರಾಜ್ಯದ ದೊಡ್ಡ ದುರಂತ. ಮಧ್ಯವರ್ತಿ ರಾಜಕೀಯ ಮಾಡೋಕೆ ಕುಮಾರಸ್ವಾಮಿ ಎಕ್ಸ್ಪರ್ಟ್. ಬಿಜೆಪಿ ಕುಮಾರಸ್ವಾಮಿಯವರನ್ನ ಬಳಸಿಕೊಂಡು ಜಾತಿ ರಾಜಕಾರಣ ಮಾಡ್ತಿದೆ. ಬಿಜೆಪಿ ನೀರಿನಿಂದ ಹೊರಗೆ ತೆಗೆದ ಮೀನಿನಂತೆ ಒದ್ಧಾಡುತ್ತಿದೆ. ಕುಮಾರಸ್ವಾಮಿ ಬೇಕಿದ್ದರೆ ವಿರೋಧ ಪಕ್ಷದ ನಾಯಕ ಆಗಲಿ. ಇದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ. ಆದರೆ ಜೆಡಿಎಸ್ ಅನ್ನ ಬಿಜೆಪಿ ಜೊತೆ ವಿಲೀನ ಮಾಡಿ. ಬಳಿಕ ಬೇಕಿದ್ದರೆ ನೀವೂ ವಿರೋಧ ಪಕ್ಷದ ನಾಯಕರಾಗಿ ಎಂದು ಲೇವಡಿ ಮಾಡಿದರು.
ಮಗ ಚನ್ನಪಟ್ಟಣಕ್ಕೆ ಬರಬೇಕು, ಸಿಪಿ ಯೋಗೇಶ್ವರ್ ಎಂಪಿ ಆಗಬೇಕು.
ಬಿಜೆಪಿ ಧರ್ಮ, ಸಾವಿನ ಮೇಲೆ ರಾಜಕಾರಣ ಮಾಡುತ್ತಿದೆ. ಉದಾಹರಣೆಗೆ ಟಿ.ನರಸೀಪುರದ ಯುವಕನ ಸಾವು. ರಾಜ್ಯದ ಜನರು ತೀರ್ಥಯಾತ್ರೆ ಮಾಡುತ್ತಾ ಚೆನ್ನಾಗಿದ್ದಾರೆ. ಆದರೆ ಬಿಜೆಪಿ ಹಾಗೂ ಜೆಡಿಎಸ್ನವರು ಆರಾಮವಾಗಿಲ್ಲ. ಕಾಂಗ್ರೆಸ್ ಯೋಜನೆಯನ್ನ ತೆಗಳುತ್ತಾ ಚಡಪಡಿಸುತ್ತಿದ್ದಾರೆ. ತಮ್ಮ ಸ್ವಾರ್ಥಕೊಸ್ಕರ ರಾಜ್ಯದ ಹೆಸರು ಹಾಳು ಮಾಡುತ್ತಿದ್ದಾರೆ. ಕುಮಾರಸ್ವಾಮಿ ಕೇಂದ್ರದ ಸಚಿವರಾಗಬೇಕು. ಮಗ ಚೆನ್ನಪಟ್ಟಣಕ್ಕೆ ಬರಬೇಕು’ ಸಿಪಿ ಯೋಗೇಶ್ವರ್ ಎಂಪಿ ಆಗಬೇಕು ಎಂಬುದೇ ಅವರ ಉದ್ದೇಶ. ಇಂದು ಬಿಡುಗಡೆ ಮಾಡಿದ ದಾಖಲೆ ಕುಮಾರಸ್ವಾಮಿ ಅಧಿಕಾರ ದಾಹದ ದಾಖಲೆ. ದೇವೇಗೌಡರ ಕುಟುಂಬ ಅಧಿಕಾರಕ್ಕಾಗಿ ಏನೆಲ್ಲ ಮಾಡಿದ್ದಾರೆ ಎಂಬ ದಾಖಲೆ ಎಂದು ಹೆಚ್.ಎ ವೆಂಕಟೇಶ್ ಹೇಳಿದರು.
ಪೆನ್ ಡ್ರೈವ್ನಲ್ಲಿ ಯಾರು ಇಲ್ಲ: ಅದು ಕೇವಲ ಬೋಗಳೆ ದಾಸ ಕುಮಾರ ಟ್ರೈಲರ್- ಕೆಪಿಸಿಸಿ ವಕ್ತಾರ’ ವಕೀಲ ಸತ್ಯಾನಂದ.
ಹೆಚ್.ಡಿ ಕುಮಾರಸ್ವಾಮಿ ಪೆನ್ ಡ್ರೈವ್ ಆರೋಪ ವಿಚಾರ ಕುರಿತು ಮಾತನಾಡಿದ ಕೆಪಿಸಿಸಿ ವಕ್ತಾರ’ ವಕೀಲ ಸತ್ಯಾನಂದ, ಇದು ಕುಮಾರಸ್ವಾಮಿ ಅವರ ಹೊಸ ಚಿತ್ರದ ಟ್ರೈಲರ್. ‘ಬೋಗಳೆ ದಾಸ ಜನ ಕುಮಾರ’ ಎಂಬ ಚಿತ್ರದ ಟ್ರೈಲರ್. ಕುಮಾರಸ್ವಾಮಿ ಅವರೇ ಈ ಚಿತ್ರದ ನಿರ್ಮಾಪಕರು. ಹಿಟ್ ಅಂಡ್ ರನ್ ಹೇಳಿಕೆ ಕೊಡುವುದರಲ್ಲಿ ಎಕ್ಸ್ಪರ್ಟ್. ಪೆನ್ ಡ್ರೈವ್ನಲ್ಲಿ ಯಾರು ಇಲ್ಲ. ಅದು ಕೇವಲ ಬೋಗಳೆ ದಾಸ ಕುಮಾರ ಟ್ರೈಲರ್. ಸಿನಿಮಾ ಯಾವುದೇ ಕಾರಣಕ್ಕೂ ರಿಲೀಸ್ ಆಗಲ್ಲ ಎಂದು ಹೇಳಿದರು.
ವಿಧಾನಸೌಧದ ಆವರಣದಲ್ಲಿ ಪೆನ್ ಡ್ರೈವ್ ಇದೆ ಅಂತಾರೆ. ಆಗಿದ್ರೆ ಯಾಕೆ ವಿಧಾನಸಭೆಯ ಕಲಾಪದಲ್ಲಿ ಚರ್ಚೆ ಮಾಡ್ತಿಲ್ಲ. ಇದೊಂದು ಕ್ರಿಮಿನಲ್ ಅಪರಾಧ ಆಗಿದೆ. ಈ ಬಗ್ಗೆ ಸಮಯ ಬಂದಾಗ ದೂರು ದಾಖಲಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ’ ವಕೀಲ ಸತ್ಯಾನಂದ ಹೇಳಿದರು.
Key words: Mediator-politics – HDK –Expert-KPCC -spokesperson -HA Venkatesh