ಬೆಂಗಳೂರು, ಮೇ 28, 2020 : (www.justkannada.in news) : ತ್ವರಿತ ಮತ್ತು ಹೆಚ್ಚಿನ ಸಂಖ್ಯೆಯ ಕೋವಿಡ್ ಮಾದರಿ ಪರೀಕ್ಷೆ ನಡೆಸಲು ಅನುವಾಗುವಂತೆ ವಿಶಿಷ್ಟ ವಿನ್ಯಾಸದ ಸ್ವಾಬ್ ಕಲೆಕ್ಟಿಂಗ್ ಬೂತ್‍ಗೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.
ಗ್ಲೋವ್ ಬಾಕ್ಸ್ ಟೆಸ್ಟಿಂಗ್ ಬೂತ್ ಹೆಸರಿನ ಈ ವಿಶಿಷ್ಟ ವಿನ್ಯಾಸದ ಬೂತ್‍ಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹೇಳಿದಿಷ್ಟು…
ಇದೊಂದು ವಿಶೇಷ ರೀತಿಯ ಮೊಬೈಲ್ ಸ್ವಾಬ್ ಸ್ವೀಕೃತಿ ಬೂತ್ ಆಗಿದ್ದು ಪರೀಕ್ಷಿಸುವವರಿಗೆ ಹಾಗೂ ಪರೀಕ್ಷೆಗೆ ಒಳಗಾಗುವವರಿಗೆ ಸೋಂಕು ತಗುಲುವ ಯಾವುದೇ ಅಪಾಯವಿಲ್ಲದೆ ಸುಲಭವಾಗಿ ಮತ್ತು ಸುರಕ್ಷಿತವಾಗಿ ಕಾರ್ಯನಿರ್ವಹಿಸಬಹುದು.
ಗ್ಲಾಸ್ ಬಾಕ್ಸ್ ಒಳಗಿನಿಂದ ಮಾದರಿಗಳನ್ನು ಸ್ವೀಕರಿಸುವ ವಿನ್ಯಾಸ ಹೊಂದಿರುವ ಈ ಬೂತ್‍ಗಳಲ್ಲಿ, ಪರೀಕ್ಷಾ ಮಾದರಿ ನೀಡುವ ವ್ಯಕ್ತಿಯು ಹೊರಗಿನಿಂದಲೇ ಸ್ಯಾಂಪಲ್ ನೀಡಬಹುದಗಿದೆ. ಇದರಿಂದ ನೇರ ಸಂಪರ್ಕವಿಲ್ಲದೆ ಶಂಕಿತರ ರಕ್ತಮಾದರಿಗಳನ್ನು ಪಡೆಯಬಹುದಾಗಿರುವುದರಿಂದ ಉಭಯ ಕಡೆಯಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಅತ್ಯಂತ ವಿರಳವಾಗಿವೆ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ. ಪಿಪಿಇ ಕಿಟ್ ಅವಶ್ಯಕತೆ ಇಲ್ಲದೆ ಕಡಿಮೆ ಸಿಬ್ಬಂದಿಯಿಂದಲೇ ಕಾರ್ಯನಿರ್ವಹಿಸಬಹುದಾದ ಈ ಬೂತ್‌ಗಳು ಪರೀಕ್ಷಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ. ಕೋವಿಡ್ ವಿರುದ್ಧದ ಸಮರದಲ್ಲಿ ಇದು ಮಹತ್ವದ ಪಾತ್ರ ವಹಿಸಲಿವೆ.
ಕೊರೋನ ವಿರುದ್ಧದ ಹೋರಾಟದಲ್ಲಿ ಆರಂಭದಿಂದಲೂ ಟೆಸ್ಟಿಂಗ್‍ಗೆ ಹೆಚ್ಚಿನ ಒತ್ತು ನೀಡುತ್ತಿರುವ ಕರ್ನಾಟಕ ಸೋಂಕಿತರ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. ಈ ನಿಟ್ಟಿನಲ್ಲಿ ಇಂತಹ ವಿಶಿಷ್ಟ ವಿನ್ಯಾಸದ ಬೂತ್ ಸಿದ್ಧಪಡಿಸಿರುವುದಕ್ಕಾಗಿ ಲ್ಯಾಮ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್‍ನ ಇಂಜಿನಿಯರ್‌ಗಳು ಮತ್ತು ವಿವಿಧ ತಜ್ಞ ವೈದ್ಯರುಗಳನ್ನು ಅಭಿನಂದಿಸಿರುವ ಸಚಿವ ಸುಧಾಕರ್ ಅವರು ಈ ಬೂತ್‍ಗಳನ್ನು ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ಮತ್ತು ಸೋಂಕು ಹೆಚ್ಚಿರುವ ಹಾಟ್ ಸ್ಪಾಟ್‌ಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು.
ಇದೇ ಸಂದರ್ಭದಲ್ಲಿ ಸಚಿವರು ಮಿಂಟೋ ಕಣ್ಣಿನ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ಯಾಸ್ಟ್ರೋಎಂಟೆರಾಲಜಿಯ ಕಟ್ಟಡದ ಪರಿವೀಕ್ಷಣೆ ನಡೆಸಿದರು.
ooo
key words : Medical Education Minister- Dr.K.Sudhakar- inaugurates- Swab collecting booth- Victoria Hospital- bangalore
———-
ENGLISH SUMMARY :
Medical Education Minister Dr.K.Sudhakar inaugurates Specially designed Swab collecting booth at Victoria Hospital
Bengaluru – May 28, 2020: A cost effective state of the art Glove box testing booth for swab collection has been inaugurated at Victoria hospital here today. Inaugurating the specially designed for safer, easier and quicker testing Medical Education Minister Dr.K.Sudhakar said that the portable booths can be used at border check posts and hot spots.
The testing method involves collection of samples from inside a box of aluminium and glass. The suspected corona virus-infected individual, whose samples are being taken, has to walk up to the booth and stand in front of the glass exterior. The healthcare worker inside the kiosk collects the sample and then, follows the sanitisation process before proceeding to take the next sample. The collection process, fully contactless, gets over in five minutes. The Minister added.
Dr.Sudhakar also said that this booth significantly reduces manpower requirement and the need for PPE kits. The main advantages of this procedure are that it needs fewer healthcare workers and strictly adheres to the norms of social distancing. The booth is low-cost. Each model costs about Rs 15,000-20,000. It is also portable and can be mounted on a vehicle and transported to any location. It can be particularly useful for collecting samples in hot spots and border checkpoints. The Minister said. He also inspected Minto eye hospital and Gastroenterology building under construction at Victoria campus during the occasion.