ಮೈಸೂರು,ಜೂನ್,24,2022(www.justkannada.in) ಕೈಗಾರಿಕಾ ಕ್ರಾಂತಿಯ ಪರಿಣಾಮ ಇಂದು ಹೆಚ್ಚಿನ ಸಸ್ಯಗಳು ಬೆಳೆಯಲು ಉತ್ತಮ ವಾತಾವರಣ ಇಲ್ಲವಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಧು ಶರ್ಮಾ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ ಮತ್ತು ಸಸ್ಯಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಮೂರನೇ ವಿಭಾಗೀಯ ಸಮನ್ವಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಔಷಧಿ ಸಸ್ಯಗಳು ನಶಿಸಿ ಹೋಗುತ್ತಿದೆ. ಅವುಗಳಿಗೆ ಒಳ್ಳೆಯ ವಾತಾವರಣ ನಿರ್ಮಾಣ ಆಗಬೇಕು. ಔಷಧಿ ಸಸ್ಯಗಳಿಂದ ಹೆಚ್ಚಿನ ಪ್ರಯೋಜನ ಇದೆ. ಇವುಗಳನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಹೆಗಲು ಮೇಲಿದೆ ಎಂದರು.
ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಮಾತನಾಡಿ, ಸಸ್ಯಗಳ ಸಂರಕ್ಷಣೆಗೆ ಅಧ್ಯಯನ ಮಾಡಲು ಅಥವಾ ಕಾರ್ಯಕ್ರಮ ಆಯೋಜಿಸಲು ವಿವಿಗಳಲ್ಲಿ ಫಂಡ್ ಇಲ್ಲವಾಗಿದೆ. ಹಾಗಾಗಿ ಸರಕಾರದಿಂದ ಇದಕ್ಕೆ ಹೆಚ್ಚಿನ ನಿಧಿ ಸಿಗಬೇಕು ಎಂದು ಆಶಿಸಿದರು. ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಹಳ್ಳಿ ವಾತಾವರಣದಲ್ಲಿ ಬೆಳೆದರೆ ಔಷಧೀಯ ಗುಣ ಇರುವ ಸಸ್ಯಗಳ ಪರಿಯಚ ಆಗುತ್ತದೆ. ಆದರೆ, ಈಗಿನ ಪೀಳಿಗೆಗೆ ಅವುಗಳ ಪರಿಚಯವೇ ಇಲ್ಲವಾಗಿದೆ. ಪಟ್ಟಣದ ಮಕ್ಕಳಿಗೆ ಯಾವ ಗಿಡ ಯಾವ ಹಣ್ಣು ನೀಡುತ್ತದೆ, ಹೇಗೆ ಬೆಳೆಯುತ್ತದೆ ಎಂಬ ಮಾಹಿತಿಯೇ ಇರುವುದಿಲ್ಲ ಎಂದು ಹೇಳಿದರು.
ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಕೆ. ಎನ್. ಅಮೃತೇಶ್ ಮಾತನಾಡಿ, ನಮ್ಮ ಸುತ್ತಮುತ್ತ ನಮಗೆ ಗೊತ್ತಿಲ್ಲದೆ ಇರುವ ಔಷಧೀಯ ಗುಣ ಇರುವ ನೂರಾರು ಪ್ರಬೇಧದ ಸಸ್ಯಗಳಿವೆ. ಅವುಗಳ ಬಗ್ಗೆ ಡಾಟಾ ಸಂಗ್ರಹ ಮಾಡುವ ಕೆಲಸ ಆಗಿಲ್ಲ. ಅದು ತುರ್ತಾಗಿ ಆಗಬೇಕಿದೆ ಎಂದು ಆಶಿಸಿದರು.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತ ಎಸ್ ಅರೇಕಲ್, ಸುದರ್ಶನ್ ಜಿ.ಎ., ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ ಸೇರಿದಂತೆ ಇತರರು ಇದ್ದರು.
Key words: Medicinal-plants-should -not –perish-Madhu Sharma-mysore university
ENGLISH SUMMARY…
Medicinal plants should not become extinct: Chief Conservator of Forests Madhu Sharma
Mysuru, June 24, 2022 (www.justkannada.in): “Industrial revolution has restricted good environment to grow plants,” observed Chief Conservator of Forests Madhu Sharma.
He inaugurated the third divisional coordinating workshop organized by the Karnataka State Medicinal Herbs Authority, and Karnataka Biodiversity Board, and the Botany Study Division, University of Mysore. “Today, medicinal herbs are becoming extinct. Hence, there is a need to create an amicable environment for them. There are lots of benefits from medicinal herbs. We must conserve them,” he said.
Former Vice-Chancellor Prof. S.R. Niranjan lamented that there are no funds to undertake studies on plants and herbs. “Hence, the government should allocate funds for it,” he said.
In his address, Prof. R. Shivappa, Registrar, University of Mysore, said, “people who have grown up in villages will be at least a little aware of medicinal herbs. But, today’s generation is unaware of it. Children living in cities have no idea of plants, trees, and fruits, how they grow, etc.,” he lamented.
Dr. K.N. Amrutesh, President, Botany Study Center, University of Mysore said, “there are hundreds of species of herbs that have medicinal qualities in our surroundings, but we don’t know about it. Efforts have not been made to collect information about this. Hence, it should be done soon.”
Additional Chief Conservator of Forests Anitha S. Arekal, Sudarshan G.A., Government Ayurveda Research Center Assistant Director Dr. Lakshminarayana Shenoi, and others were present.
Keywords: Medicinal plants/ extinct/ Forest officer