ಬೆಂಗಳೂರು,ಮಾರ್ಚ್,1,2022(www.justkannada.in): ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ 3ನೇ ದಿನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ ದುರುದ್ಧೇಶದಿಂದ ನಮ್ಮ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
3ನೇ ದಿನ ಪಾದಯಾತ್ರೆ ಆರಂಬವಾಗಿದ್ದು ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಇನ್ನೂ 3 ದಿನ ಟ್ರಾಫಿಕ್ ಜಾಮ್ ಆಗಬಹದು. ಬೆಂಗಳೂರು ಜನತೆಯ ಬಳಿ ಕ್ಷಮೆ ಕೇಳುತ್ತೇನೆ. ಪಾದಯಾತ್ರೆಗೆ ಪಕ್ಷಭೇದ ಮರೆತು ಸಹಕಾರ ನೀಡಿದ್ದಾರೆ. ಮುರಘಾಶ್ರೀ ಸೇರಿ ಕೆಲವು ಶ್ರೀಗಳು ಸಹಕಾರ ನೀಡಿದ್ದಾರೆ. ಜನರು ರೈತರ ಬದುಕಿಕಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಪಾದಯಾತ್ರೆ ಬೆಂಗಳೂರಿಗೆ ತಲುಪಿದೆ. ಬಿಬಿಎಂಪಿ ಕಮಿಷನರ್ ನಮ್ಮಬ್ಯಾನರ್ ತೆಗೆಸಿದ್ದಾರೆ. ಸರ್ಕಾರ ನಮ್ಮ ವಿರುದ್ಧ ದುರುದ್ಧೇಶದಿಂದ ಪ್ರಕರಣ ದಾಖಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಡಿಯುವ ನೀರಿಗೆ ಯಾರ ಅನುಮತಿಯೂ ಬೇಡ ಎಂದು ಬೊಮ್ಮಾಯಿ ಹೇಳಿದ್ದಾರೆ. ಪಾದಯಾತ್ರೆ ಮಾಡುವುದರಿಂದ ನಮಗೆ ಅಡ್ಡಿಯಿಲ್ಲ ಎಂದಿದ್ದಾರೆ ಇದು ಕಾರಜೋಳಗೆ ಗೊತ್ತಿಲ್ವಾ..? ಸೆಕ್ಷನ್ 144 ಜಾರಿಯಿದ್ರೂ ಅವರ ಕಾರ್ಯಕ್ರಮ ಮಾಡಿದ್ದಾರೆ ಆದ್ರೆ ನಾವು ಪಾದಯಾತ್ರೆ ಹೊರಟಿದ್ದಕ್ಕೆ ಕೇಸ್ ಹಾಕಿದ್ದಾರೆ. ಕೆಲ ಪೊಲೀಸರು ನಮಗೆ ತೊಂದರೆ ಕೊಡುತ್ತಿದ್ದಾರೆ. ಅವರ ಹೆಸರು ನೆನಪಿದೆ. ಅಧಿಕಾರ ಶಾಸ್ವತ ಅಲ್ಲ ಸಚಿವ ಈಶ್ವರಪ್ಪ ಹೋದಾಗ ಏನು ಕ್ರಮ ಜರುಗಿಸಿದ್ದರು ಆರಗ ಜ್ಞಾನೇಂದ್ರ ಒಬ್ಬ ನಾಲಾಯಕ್ ಎಂದು ಹರಿಹಾಯ್ದರು.
Key words: Meekadattu-Hike-congress – DK Shivakumar