ರಾಜ್ಯದ ಜನರಿಗಾಗಿ ಮೇಕೆದಾಟು ಪಾದಯಾತ್ರೆ: ಕೇಸ್ ಹಾಕಿದ್ರೆ ಹೆದರಲ್ಲ- ಸರ್ಕಾರದ ವಿರುದ್ಧ ಸಿದ್ಧರಾಮಯ್ಯ ಗುಡುಗು.

ಬೆಂಗಳೂರು,ಜನವರಿ,11,2022(www.justkannada.in):  ರಾಜ್ಯದ ಜನರಿಗಾಗಿ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಮೇಲೆ ಕೇಸ್ ಹಾಕಿದ್ರೆ ನಾವು ಹೆದರಲ್ಲ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ಗುಡುಗಿದರು.

ಕನಕಪುರದಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಮೇಕೆದಾಟು ಆರಂಭಿಸಿದ್ಧೇ ನಾವು. ಡಿಪಿಆರ್ ತಯಾರಿಸಿದ್ದು ಕಾಂಗ್ರೆಸ್ ಸರ್ಕಾರ. ಎರಡುವರೆ ವರ್ಷದಿಂದ ಇವರು ಏನು ಮಾಡಿದ್ರು..?  2008ರಲ್ಲಿ ಬಿಜೆಪಿ ಸರ್ಕಾರ ಬಂತು.  ಆಗ ಯಾಕೆ ಯೋಜನೆ ಜಾರಿ ಮಾಡಲಿಲ್ಲ. ನಿಜವಾಗಿಯೂ ಕಾಳಜಿ ಇದ್ದಿದ್ದರೇ ಆಗಲೇ ಜಾರಿ ಮಾಡುತ್ತಿದ್ದರು. ಕುಡಿಯುವ ನೀರಿಗೆ ಮೊದಲು ಪ್ರಾಮುಖ್ಯತೆ ಕೊಡಬೇಕು. ರಾಜ್ಯ ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಯಾಕೆ ಯೋಜನೆ ಆರಂಭಿಸಿಲ್ಲ ಎಂದು ಪ್ರಶ್ನಿಸಿದರು.

ನಾರಿಮನ್ ಸಲಹೆ ಪಡೆದು ಡಿಪಿಆರ್ ಸಿದ್ಧಪಡಿಸಿದ್ದವು. ಪರಿಸರ ಇಲಾಖೆ ಅನುಮತಿ ನೀಡಲಿಲ್ಲ ಆದರೆ ಈಗ ಯೋಜನೆ ಪ್ರಾರಂಭಿಸಬಹುದು ಆದರೆ ಯಾಕೆ ವಿಳಂಬ ಮಾಢುತ್ತಿದ್ದೀರಿ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ನಾನು ಇಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ. ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಬಂದಿದ್ದಾರೆ. ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ಜನರಿಗೆ ಕುಡಿಯೂ ನೀರು ನಿವಾರಣೆಗಾಗಿ ಪಾದಯಾತ್ರೆ ಮಾಡುತ್ತಿದ್ದೇವೆ. ಕೇಸ್ ಹಾಕಿದರೇ ಹಾಕಿಕೊಳ್ಳಲಿ ನಾವು ಹೆದರುವುದಿಲ್ಲ.

ಎಲ್ಲಾ ಕಡೆ ಬಿಜೆಪಿ ಸಭೆ ಸಮಾರಂಭ ನಡೆಯುತ್ತಿದೆ. ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಅವರ ಮೇಲೆ ಕೇಸ್ ಹಾಕಿದ್ದೀರಾ. ಶೋಭಾ ಕರಂದ್ಲಾಜೆ ಅವರ ಮೇಲೆ ಯಾಕೆ ಕೇಸ್ ಹಾಕಿಲ್ಲಾ..?   ತಮಿಳುನಾಢಿನಲ್ಲಿ ಮತ ಹೆಚ್ಚಿಸಿಕೊಳ್ಳಲು ಬಿಜೆಪಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ ಎಂದು ಸಿದ್ಧರಾಮಯ್ಯ ಆರೋಪಿಸಿದರು.

Key words: Meekadatu plan- former CM-Siddaramaiah -padayatra

ENGLISH SUMMARY…

Mekedatu Padayatra being held for the people of Karnataka: We aren’t scared of imprisonment – Siddaramaiah
Bengaluru, January 11, 2022 (www.justkannada.in): “We are taking out the padayatra for the cause of the people of Karnataka. We are not scared of imprisonment or any case,” opined leader of opposition Siddaramaiah.
Addressing a press meet in Kanakapura today, he said, “It is we who started the Mekedatu project. It was the Congress government which prepared the DPR. What has the present government done in the last two-and-a-half- years? The BJP came to power in the State in 2008. Why it didn’t implement the project then? If they were so concerned about our people they could have acted then itself. Drinking water should be given priority. The BJP is in power both in the State and the centre as well. Then why they didn’t start it?” he questioned.
“We had prepared the DPR after getting suggestion from our legal advisor Fali Nariman. But the environment department did not approve. But now they can commence the project, then why are they delaying?” he added.
Keywords: Siddaramaiah/ Mekedatu project/ padayatra
————————————