ಕೇಂದ್ರ ಸಚಿವರ ಭೇಟಿ: ಸರ್ಕಾರದ ಸಾಧನೆಯ ಕಿರುಹೊತ್ತಿಗೆ ನೀಡಿ ಚರ್ಚಿಸಿದ ಸಿಎಂ ಬಸವರಾಜ ಬೊಮ್ಮಾಯಿ.

ನವದೆಹಲಿ,ಫೆಬ್ರವರಿ,8,2022(www.justkannada.in): ಸಿಎಂ ಬಸವರಾಜ ಬೊಮ್ಮಾಯಿ ಇಂದು ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರನ್ನ ಭೇಟಿಯಾಗಿ ರಾಜ್ಯದ ಸ್ಥಿತಿಗತಿ ಕುರಿತು ಚರ್ಚೆ ನಡೆಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಳೆದ ಆರು ತಿಂಗಳ ಅವಧಿಯಲ್ಲಿ ತಮ್ಮ ನೇತೃತ್ವದ ಸರ್ಕಾರ ಮಾಡಿರುವ ಸಾಧನೆಯ ಕಿರುಹೊತ್ತಿಗೆಯನ್ನು ನೀಡಿ ಅದರ ಸಾರಾಂಶವನ್ನು ಅಮಿತ್ ಷಾ ಅವರಿಗೆ ವಿವರಣೆ ನೀಡಿದರು.

ತಮ್ಮ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳಿಂದ ಜನಸಾಮಾನ್ಯರು ಹಾಗೂ ಬಡವರಿಗೆ ಆಗುವ ಲಾಭಗಳ ಕುರಿತು ಐಸಾಕ್ ನಡೆಸಿರುವ ಅಧ್ಯಯನ ವರದಿಯನ್ನು ಇದೇ ಸಂದರ್ಭದಲ್ಲಿ ನೀಡಿದರು. ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಅಮಿತ್ ಶಾ ಅವರು ಪ್ರಶಂಸೆ ವ್ಯಕ್ತಪಡಿಸಿದರು.  ಇದೇ ಸಂದರ್ಭದಲ್ಲಿ ರಾಜ್ಯದಲ್ಲಿನ ಸ್ಥಿತಿಗತಿ ಕುರಿತು ಅಮಿಷಾ ಅವರ ಜೊತೆ ಬೊಮ್ಮಾಯಿ ಚರ್ಚೆ ನಡೆಸಿದರು.

ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ.

ಹಾಗೆಯೇ  ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕಳೆದ ಆರು ತಿಂಗಳ ಅವಧಿಯಲ್ಲಿ ತಮ್ಮ ನೇತೃತ್ವದ ಸರ್ಕಾರ ಮಾಡಿದ ಸಾಧನೆಯ ಕಿರುಹೊತ್ತಿಗೆ ಹಾಗೂ ತಮ್ಮ ಸರ್ಕಾರದ ಯೋಜನೆಗಳಿಂದ ಬಡವರು ಹಾಗೂ ದೀನ-ದಲಿತರಿಗೆ ಮುಂದಿನ ದಿನಗಳಲ್ಲಿ ಆಗುವ  ಲಾಭ ಹಾಗೂ ಬದಲಾವಣೆ ಕುರಿತು ಐಸೆಕ್ ಸಂಸ್ಥೆ ನೀಡಿರುವ ಅಧ್ಯಯನ  ವರದಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದರಾದ ಶಿವಕುಮಾರ ಉದಾಸಿ, ಉಮೇಶ್ ಜಾದವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Key words: Meet-Union Ministers- CM Basavaraja Bommai

ENGLISH SUMMARY…

CM Bommai visits Union Minister
New Delhi, February 8, 2022 (www.justkannada.in): Chief Minister Basavaraj Bommai today met Union Ministers Amit Shah and Rajnath Singh and discussed various issues and the status of the State.
He presented a booklet published on the six months achievements of his government, to Union Home Minister Amit Shah and explained to him in detail the progress made in the state.
He also submitted a research report undertaken by ISEC on the various pro-people programs of the State Government and its benefits to the poor people and common man. Amit Shah appreciated the achievements of Basavaraj Bommai’s government.
The Chief Minister Basavaraj Bommai also met Union Defence Minister Rajnath Singh and presented the six months achievement booklet and the ISEC report.
He was accompanied by Water Resources Minister Govind Karajola, State BJP President Nalin Kumar Kateel, MPs Shivakumar Udasi, Umesh Jadhav.
Keywords: Chief Minister/ Basavaraj Bommai/ meets Union Ministers/ discussion