ಮೈಸೂರು, ಏಪ್ರಿಲ್ 17, 2020 (www.justkannada.in): ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಡಾ.ಪರಶಿವಮೂರ್ತಿ,
ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಮೈಸೂರು ಜಿಲ್ಲೆ ಯ ಪೊಲೀಸ್ ಅಧೀಕ್ಷಕರವರೊಂದಿಗೆ ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ನಂಜನಗೂಡಿನಲ್ಲಿ ಜೂಬಿಲಿಯoಟ್ ಕಾರ್ಖಾನೆ ನೌಕರರು ಹೆಚ್ಚಾಗಿ ವಾಸವಿರುವ ಬಡಾವಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮತ್ತು ಜೂಬಿಲಿಯoಟ್ ಕಾರ್ಖಾನೆ ಸಿಬ್ಬಂದಿಯವರಿಗೆ ಅಗತ್ಯ ಸುರಕ್ಷಿತ ಕ್ರಮಗಳನ್ನು ಕೈ ಗೊಳ್ಳುವಂತೆ ಮತ್ತು ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ತಿಳಿಸಿದ್ದು ನೌಕರರಿಗೆ ಮಾನಸಿಕ ಧೈರ್ಯ ತುಂಬಿದರು.
ನಂತರ ಎಡಿಜಿಪಿ ರವರು ಡಿ ವೈ ಎಸ್ ಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಲಾಕ್ ಡೌನ್ ಬಗ್ಗೆ ತೆಗೆದು ಕೊಂಡಿರುವ ಕ್ರಮಗಳ ಬಗ್ಗೆ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಮತ್ತು ಕರ್ತವ್ಯ ನಿರತ ಸಿಬ್ಬಂದಿಗಳ ಸುರಕ್ಷತೆ ಮತ್ತು ಯೋಗಕ್ಷೇಮಗಳ ಬಗ್ಗೆ ಇಲಾಖೆ ತೆಗೆದುಕೊಂಡಿರುವ ಕ್ರಮಗಳನ್ನು ಬಗ್ಗೆ ಪರಿಶೀಲಿಸಿದ್ದು, ಹಲವು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ನಂತರ ನಂಜನಗೂಡಿನ ಸಿಂಧುವಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಗೆ ನಂಜನಗೂಡಿನ ಶಾಸಕರಾದ ಶ್ರೀ ಹರ್ಷವರ್ದನ್ ರವರು ಹಾಗೂ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜೊತೆ ಗೂಡಿ ಭೇಟಿ ನೀಡಿದ್ದು, ಸದರಿ ಶಾಲೆಯಲ್ಲಿ ಕ್ವಾರಂಟೈನಲ್ಲಿರುವ ಜುಬಿಲಿಯಂಟ್ ಫ್ಯಾಕ್ಟರಿಯ ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸಿ ಸಂಬಂಧಪಟ್ಟವರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.