ನವದೆಹಲಿ, ಆಗಸ್ಟ್ 31,2023(www.justkannada.in): ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಇದೆ. ಹೀಗಾಗಿ ದೆಹಲಿ ವಕೀಲರ ಜೊತೆಗೆ ಚರ್ಚೆ ನಡೆಸಿದ್ದೇನೆ. ರೈತರ ಹಿತ ಕಾಯುವ ಕೆಲಸ ಮಾಡಬೇಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ನವದೆಹಲಿಯಲ್ಲಿ ಕಾನೂನು ತಜ್ಞರ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನಾಳೆ ವಿಚಾರಣೆ ಇರುವ ಹಿನ್ನೆಲೆಯಲ್ಲಿ ತಜ್ಞರ ಜತೆ ಚರ್ಚೆ ಮಾಡಿದ್ದೇನೆ. ಹಿರಿಯ ವಕೀಲ ಶ್ಯಾಮ್ ದಿವಾನ್ ಜೊತೆಗೂ ಚರ್ಚೆ ಮಾಡಲಿದ್ದೇವೆ. ತಮಿಳುನಾಡು ನಿತ್ಯ 24,000 ಕ್ಯೂಸೆಕ್ ನೀರು ಬಿಡಬೇಕೆಂದು ಕೇಳಿತ್ತು. ಸದ್ಯ 5000 ಕ್ಯೂಸೆಕ್ ಗೆ ಇಳಿಸಿದೆ, ವಾಸ್ತವಾಂಶ ಗಮನಕ್ಕೆ ತಂದಿದ್ದೇವೆ ಎಂದರು.
ನಾವು ನೀರು ಬಿಟ್ಟಿದ್ದೇವೆ, ಅವರು ಹೇಗೆ ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಅಗತ್ಯವಿಲ್ಲ. ನಾವು ಆ ವಿಚಾರ ಚರ್ಚೆ ಮಾಡಲ್ಲ. ಮೇಕೆದಾಟು ಒಂದೇ ಪರಿಹಾರ, ಇದು ತಮಿಳುನಾಡಿಗೆ ಅನುಕೂಲ. ವಾಸ್ತವಾಂಶ ನೋಡಲು ಕಾವೇರಿ ನೀರು ನಿಯಂತ್ರಣಾ ಸಮಿತಿ ತಂಡವನ್ನ ಕರೆಯಲಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
Key words: Meeting -lawyers -Cauvery water- dispute- DK Shivakumar.