ನವದೆಹಲಿ,ಜೂನ್,28,2024 (www.justkannada.in): ಕೇಂದ್ರ ಸಚಿವರನ್ನ ಭೇಟಿ ಮಾಡಿ ಚರ್ಚಿಸಿದ್ದೇವೆ. ರಾಜ್ಯದ ಸಂಸದರ ಜೊತೆ ಚರ್ಚೆ ಮಾಡಿದ್ದೇವೆ ಪಕ್ಷ ಭೇದ ಮರೆತು ಕರ್ನಾಟಕದ ಒಳತಿಗಾಗಿ ನಿಲ್ಲುವ ಪ್ರಯತ್ನ ಮಾಡುತ್ತೇವೆ. ರಾಜ್ಯಕ್ಕೆ ಬರಬೇಕಾಗಿರುವ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೇಂದ್ರದ ಮೇಲೆ ಒತ್ತಡ ಹಾಕಿ ಯೋಜನೆಗಳ ಮಂಜೂರಿಗೆ ಸಂಸದರಿಗೆ ಸಲಹೆ ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಯೋಜನೆಗಳನ್ನ ಸಂಸತ್ ಸದಸ್ಯರ ಗಮನಕ್ಕೆ ತರಲಾಗಿದೆ ಕೇಂದ್ರದ ಮೇಲೆ ಒತ್ತಡ ಹಾಕಿ ಮಂಜೂರು ಮಾಡಿಸಲು ಹೇಳಿದ್ದೇವೆ. ಕೇಂದ್ರ ಮಂತ್ರಿಗಳೂ ಉತ್ತರದ ರೂಪದಲ್ಲಿ ಪತ್ರ ಕೊಟ್ಟಿದ್ದಾರೆ. ಬಿಜೆಪಿ ನಿಲುವು ಪ್ರಸ್ತಾಪಿಸಿದ್ದಾರೆ. ಆದರಲ್ಲಿ ಸಾಕಷ್ಟು ಸುಳ್ಳುಗಳಿವೆ. ಉದಹಾರಣೆಗೆ ಮಹದಾಯಿ ಯೋಜನೆ ಬಗ್ಗೆ ಕೋರ್ಟ್ ನಲ್ಲಿ ಕೇಸ್ ಇದೆ ಅಂದಿದ್ದಾರೆ. ಆದರೆ ಮಹದಾಯಿ ಯೋಜನೆ ಗೆಜೆಟ್ ನೋಟಿಪಿಕೇಷನ್ ಆಗಿದೆ ಆದರೆ ಪರಿಸರದ ಅನುಮತಿ ಕೊಡಬೇಕಷ್ಟೆ ಆದರೆ ಕೋರ್ಟ್ ನಲ್ಲಿದೆ ಎಂದು ಹೇಳಿದ್ದಾರೆಂದು ಕಿಡಿಕಾರಿದರು.
ಭದ್ರ ಮೇಲ್ದಂಡೆ ಯೋಜನೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಘೋಷಣೆ ಮಾಡಿರುವ ಅನುದಾನ ಬಿಡುಗಡೆ ಮಾಡಿಲ್ಲ ರಾಜ್ಯ ಸರ್ಕಾರದಿಂದ ತಾಂತ್ರಿಕ ಸಮಸ್ಯೆ ಎಂದಿದ್ದಾರೆ. ನಮ್ಮ ರಾಜ್ಯದಿಂದ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಯೋಜನೆಗೆ 5300 ಕೋಟಿ ರೂ ಕೊಡುವುದಾಗಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
Key words: meeting, MPs, state, development, CM Siddaramaiah