ಮೈಸೂರು,ಜನವರಿ,25,2021(www.justkannada.in): ಬೆಳಗೊಳದ ಸಮಸ್ಯೆ ಕುರಿತಾದ ವಿಷಯಕ್ಕೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ವಿರುದ್ಧ ಶಾಸಕ ಎಲ್. ನಾಗೇಂದ್ರ ಗರಂ ಆದ ಘಟನೆ ನಡೆಯಿತು.
ಮೈಸೂರು ನಗರದ ರಿಂಗ್ ರಸ್ತೆಗೆ ಸಂಬಂಧಿಸಿದ ಸ್ವಚ್ಛತೆ ಮತ್ತು ಡಬ್ರಿಸ್ ಸಭೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಮುಡಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ನಗರದ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಸಂಸದ ಪ್ರತಾಪ್‌ಸಿಂಹ, ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಆಯುಕ್ತ ನಟೇಶ್, ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಸೇರಿದಂತೆ ಮುಡಾ ಅಧಿಕಾರಿಗಳು ಭಾಗಿಯಾಗಿದ್ದರು.
ಬೆಳಗೊಳದ ಸಮಸ್ಯೆ ಕುರಿತಾದ ವಿಷಯಕ್ಕೆ ಸಭೆಯಲ್ಲಿ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ವಿರುದ್ಧ ಏರು ದನಿಯಲ್ಲಿ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಸಮಸ್ಯೆ ತಮ್ಮ ಗಮನಕ್ಕೆ ಏಕೆ ತಂದಿಲ್ಲವೆಂದು ಆಯುಕ್ತರ ವಿರುದ್ಧ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತಂದರೆ ಸಮಸ್ಯೆ ಬಗೆಹರಿಸಲು ನಾನು ಪ್ರಯತ್ನಿಸುವೆನೆಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಸಮಾಧಾನ ಮಾಡಲು ಮಧ್ಯ ಪ್ರವೇಶಿಸಿದ ಪ್ರತಾಪ್ ಸಿಂಹರಿಗೂ ಸಭೆಯಿಂದ ಹೊರ ನಡೆಯೋದಾಗಿ ನಾಗೇಂದ್ರ ಎಚ್ಚರಿಕೆ ನೀಡಿದರು. ನಾನು ಕೂಡ ಕಾರ್ಪೋರೇಟರ್, ಮುಡಾ ಅಧ್ಯಕ್ಷನಾಗಿ ಶಾಸಕನಾಗಿರುವನು. ಮುಡಾ ಅಧ್ಯಕ್ಷನಾಗಿ ನಾನು ಮಾಡಿದ ಕೆಲಸವನ್ನು ರಾಜೀವ್ ಇನ್ನೂ ಐದು ವರ್ಷವಿದ್ದರೂ ಮಾಡಲಾರರು ಎಂದು ಸಭೆಯಲ್ಲಿ ಏರುಧ್ವನಿಯಲ್ಲೇ ಹೇಳಿದರು. ಶಾಸಕರ ಮಾತಿನಿಂದ ಮುಡಾ ಅಧ್ಯಕ್ಷ ಹೆಚ್. ವಿ. ರಾಜೀವ್ ಪೆಚ್ಚಾದ ಘಟನೆ ನಡೆಯಿತು.
Key words: meeting-mysore- muda-MLA-Nagendra – upset- mysore city corporatin- Commissioner