ಚಿಕ್ಕಬಳ್ಳಾಪುರ,ಮಾರ್ಚ್,7,2022(www.justkannada.in): ಮೇಕೆದಾಟು ಯೋಜನೆ ಜಾರಿ ಸಂಬಂಧ ಕರ್ನಾಟಕ ಸಿಎಂ ಮತ್ತು ತಮಿಳುನಾಡು ಸಿಎಂ ಮುಖಾಮುಖಿಯಾಗಿ ಚರ್ಚಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಲಹೆ ನೀಡಿದ್ದಾರೆ.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಬೆಂಗಳೂರಿನಲ್ಲಿ ನೀರಿನ ಕೊರತೆ ಹೆಚ್ಚಾಗಿದೆ. ವಾಟರ್ ಟ್ಯಾಂಕರ್ ಮಾಫಿಯ ಎದುರಾಗಿದೆ. ಬೆಂಗಳೂರಿನಲ್ಲಿ ಆದಷ್ಟು ಬೇಗ ಯೋಜನೆ ಅನುಷ್ಟಾನ ಮಾಡಿ ಎಂದರು.
ಕ್ಯಾತೆ ತೆಗೆಯುವುದೇ ತಮಿಳುನಾಡಿನ ಉದ್ದೇಶ. ಮೇಕೆದಾಟು ವಿಚಾರದಲ್ಲಿ ತಮಿಳುನಾಡು ರಾಜಕೀಯ ಮಾಡುತ್ತಿದೆ. ತಮಿಳುನಾಡು ಸಿಎಂ ಕರ್ನಾಟಕ ಸಿಎಂ ಮುಖಾಮುಖಿ ಮಾತನಾಡಲಿ. ಉಭಯ ರಾಜ್ಯಗಳ ಸಿಎಂ ಮಾತನಾಡಿದರೆ ನಮ್ಮ ಅಭ್ಯಂತರವಿಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ರಾಜ್ಯ ಬಜೆಟ್ ನಲ್ಲಿ ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಅನುದಾನ ನೀಡಿದ್ದೀರಾ. ಕೆಲಸ ಆರಂಭಿಸಿ ಎಂದು ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
Key words: mekedatu-DK Shivakumar-CM-basavaraj bommai