ಬೆಂಗಳೂರು,ಮಾರ್ಚ್,21,2022(www.justkannada.in): ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗಿದ್ದು ಇದನ್ನ ಮಾಜಿ ಸಿಎಂ ಸಿದ್ಧರಾಮಯ್ಯ ಖಂಡಿಸಿದ್ದಾರೆ.
ತಮಿಳುನಾಡು ನಿರ್ಣಯಕ್ಕೆ ಆಕ್ರೋಶ ವ್ಯಕ್ತಡಿಸಿರುವ ಸಿದ‍್ಧರಾಮಯ್ಯ, ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ನಿರ್ಣಯ ಖಂಡನೀಯ. ಇದು ಅಸಮರ್ಪಕ, ಯಾರು ಒಪ್ಪಲು ಸಾಧ್ಯವೇ ಇಲ್ಲದ ನಿರ್ಣಯ. ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ರಾಜಕೀಯಕ್ಕಾಗಿ ತಮಿಳುನಾಡು ಖ್ಯಾತೆ ತೆಗೆದಿದೆ. 2018ರಲ್ಲೇ ವಿವಾದಕ್ಕೆ ತೆರೆಬಿದ್ದಿದೆ. ಹೀಗಾಗಿ ತಮಿಳುನಾಡು ತಗಾದೆಗೆ ಸೊಪ್ಪು ಹಾಕಬಾರದು ಪರಿಸರ ಇಲಾಖೆ ಕ್ಲಿಯರೆನ್ಸ್ ನೀಡಬೇಕು ಕೇಂಧ್ರ ಇಚ್ಛಾಶಕ್ತಿ ಪ್ರದರ್ಶಿಸಬೇಕು. ತೀರ್ಪು ಬಂದ ನಂತರ 400 ಟಿಎಂಸಿ ನೀರು ತಮಿಳುನಾಡಿಗೆ ಹೆಚ್ಚುವರಿಯಾಗಿ ಹೋಗಿದೆ. ಹೀಗಿರುವಾಗ ಕೇಂದ್ರ ಪರಿಸರ ಇಲಾಖೆ ಎನ್ ಒಸಿ ನೀಡಬೇಕು ಎಂದರು.
ತಮಿಳುನಾಡಿಗೂ ಈ ಯೋಜನೆಗೂ ಸಂಬಂಧವಿಲ್ಲ. ವೋಟ್ ಹೆಚ್ಚಿಸಿಕೊಳ್ಳಲು ಬಿಜೆಪಿ ನಾಟಕ ಮಾಡುತ್ತಿದೆ. ಅಣ್ಣಾಮಲೈ ಧರಣಿಗೆ ಕೂತಿದ್ದು ನಾಟಕವಷ್ಟೆ ಎಂದು ಸಿದ್ಧರಾಮಯ್ಯ ಟೀಕಿಸಿದರು.
Key words: mekedatu plan-Former CM-Siddaramaiah