ಬೆಂಗಳೂರು,ಮಾರ್ಚ್,22,2022(www.justkannada.in): ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ನಿರ್ಣಯ ಮಂಡಿಸಿರುವುದಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತಂತೆ ಇಂದು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿ ತಮಿಳುನಾಡು ಸರ್ಕಾರದ ವಿರುದ್ಧ ಗುಡುಗಿದ ಸಿದ್ಧರಾಮಯ್ಯ, ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ 2018ರಲ್ಲಿ ಸುಪ್ರೀಂಕೋರ್ಟ್ ನಿಂದ ತೀರ್ಪು ಬಂದಿದೆ ತೀರ್ಪನ್ನ ನಾವು ಒಪ್ಪಿಕೊಂಡಿದ್ದೇವೆ. ತಮಿಳುನಾಡು ಸಹ ಒಪ್ಪಿಕೊಂಡಿದೆ. ಪ್ರತಿವರ್ಷ 177.35 ಟಿಎಂ ಸಿ ನೀರು ತಮಿಳುನಾಡಿಗೆ ಕೊಡಬೇಕು ಎಂದು ತೀರ್ಪು ಬಂದಿದೆ. ಆದರೆ ಕಾವೇರಿ ವಿಚಾರವಾಗಿ ತಮಿಳುನಾಡು ಪದೇ ಪದೇ ಕ್ಯಾತೆ ತೆಗೆಯುತ್ತಿದೆ. ಕಾಲು ಕೆರುದುಕೊಂಡು ಬಂದ್ರೆ ಕನ್ನಡಿಗರು ಸುಮ್ಮನಿರಬೇಕಾ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯೋಣ. ಎರಡು ಸದನಗಳಲ್ಲಿ ನಿರ್ಣಯ ಮಂಡಿಸೋಣ ಎಂದು ಸಿದ್ಧರಾಮಯ್ಯ ತಿಳಿಸಿದರು.
Key words: mekedatu-plan- Former CM- Siddaramaiah