ಮೇಕೆದಾಟು ಯೋಜನೆ ವಿಚಾರ: ಅಣ್ಣಾಮಲೈಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟಾಂಗ್.

ಹೊಸಪೇಟೆ,ಆಗಸ್ಟ್,17,2021(www.justkannada.in):  ಮೇಕೆದಾಟು ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತೆ ತೆಗೆದಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟಾಂಗ್ ನೀಡಿದ್ದಾರೆ.

ಹೊಸಪೇಟೆಯಲ್ಲಿ ಈ ಕುರಿತು ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಮೇಕೆದಾಟು ಯೋಜನೆ ಜಾರಿಗೆ ಯಾರಪ್ಪನ ಅಪ್ಪಣೆಯೂ ಬೇಕಿಲ್ಲ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ಅವರ ರಾಜ್ಯದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಮಾತನಾಡಿದ್ದಾರೆ. ಆದರೆ ನಮ್ಮ ರಾಜ್ಯದ ನೀರನ್ನ ನಾವು ಬಳಸಿಕೊಳ್ಳಲು ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದರು.

ಖಾತೆ ಹಂಚಿಕೆಯ ಗೊಂದಲದ ಬಗ್ಗೆ ನಾನು ಯಾವುದೇ ರೀತಿಯ ವ್ಯಾಖ್ಯಾನ ಮಾಡುವುದಿಲ್ಲ. ಅದನ್ನು ಸಿ.ಎಂ. ಸಮರ್ಥವಾಗಿ ನಿಭಾಯಿಸುತ್ತಾರೆ’ ಎಂದು  ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ENGLISH SUMMARY…

Mekedatu Project: Irrigation Minister Govind Karjol counters Anna Malai
Hospet, August 17, 2021 (www.justkannada.in): Irrigation Minister Govind Karajol has given a counter to the statement on the Mekedatu project by BJP Tamil Nadu State President Anna Malai.
Speaking at Hospet today, he said, “We don’t need permission of anybody to implement the Mekedatu project. BJP Tamil Nadu State president Anna Malai is speaking keeping in mind just the interests of his state. Why should we take permission of somebody to use our water?”, he said.
In his response to the question about the distribution of portfolios, he said he would not like to analyze it and said I leave it to the CM, who is capable of doing it.
Keywords: Irrigation Minister/ Govind Karajol/ BJP Tamil Nadu State/ Anna Malai/ Mekedatu project

Key words: mekedatu- Planning- Issue-Minister -Govinda Karajola- Tong -Annamalai.