ಯಾದಗಿರಿ, ಜನವರಿ, 24,2025 (www.justkannada.in): ಮೀಟರ್ ಬಡ್ಡಿ ದಂಧೆಗೆ ಯುವಕ ಬಲಿಯಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ನಗರದ ಲಾಡೇಜಗಲ್ಲಿಯಲ್ಲಿ ಈ ಘಟನರ ನಡೆದಿದೆ. ಖಾಸೀಂ ಮೃತ ವ್ಯಕ್ತಿ. ಮೀಟರ್ ಬಡ್ಡಿ ಸಾಲ ಮರು ಪಾವತಿಸದಕ್ಕೆ ಖಾಸೀಂ ಮೇಲೆ ಆರೋಪಿ ಯಾಸೀನ್ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಹತ್ಯೆಗೈದಿದ್ದಾನೆ ಎನ್ನಲಾಗಿದೆ
ಮೃತ ಖಾಸೀಂ ಆರೋಪಿ ಯಾಸೀನ್ ಬಳಿ ಸಾಲ ಪಡೆದಿದ್ದನು. ಜನವರಿ 19ರಂದು 35 ಸಾವಿರ ರೂಪಾಯಿ ಸಾಲ ಮರು ಪಾವತಿಸಬೇಕಿತ್ತು. ಆದರೆ, ಸಾಲ ಮರು ಪಾವತಿಸುವಲ್ಲಿ ತಡವಾಗಿದ್ದಕ್ಕೆ ಯಾಸೀನ್ ಬಾರುಕೋಲ್, ಮೊಣಕಾಲಿನಿಂದ ಒದ್ದು ಖಾಸಿಂ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದನು.
ಗಂಭೀರವಾಗಿ ಗಾಯಗೊಂಡಿದ್ದ ಖಾಸೀಂನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ವೈದ್ಯರ ಸಲಹೆ ಮೇರೆಗೆ ಕುಟುಂಬಸ್ಥರು ಖಾಸಿಂನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸೀಂ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಈ ಕುರಿತು ಯಾಸೀನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Meter interest scam, Youth, killed